ಸಾರಾಂಶ
ನವದೆಹಲಿ: ಗೋಲ್‌ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರ ಬಳಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು ಗ್ರಾಹಕರಿಗೆ ಶಾಕ್ ನೀಡಿದೆ.
ಜಾರ್ಖಂಡ್‌ನ ಗರ್ವ್ಹಾದಲ್ಲಿ ಕೆಲ ವ್ಯಕ್ತಿಗಳು ಇಂಥದ್ದೊಂದು ಕೃತ್ಯ ಎಸಗುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಗೋಲ್‌ಗಪ್ಪಾ ತಯಾರಿಸಲು ಬಳಸುವ ಹಿಟ್ಟನ್ನು ಕಾಲಿನಲ್ಲಿ ತುಳಿಯುತ್ತಾ ಇದ್ದಿದ್ದು ಕಂಡುಬಂದಿದೆ. ವಿಚಾರಣೆ ವೇಳೆ ಗೋಲ್‌ಗಪ್ಪಾ ರುಚಿ ಹೆಚ್ಚಿಸಲು ಅದಕ್ಕೆ ಯೂರಿಯಾ ಮತ್ತು ಹಾರ್ಪಿಕ್ ಬಳಸಿದ್ದನ್ನು ಒಪ್ಪಿಕೊಂಡಿದ್ದಾರೆ.
ಗಂಡನ ಆಯಸ್ಸು ಹೆಚ್ಚಳಕ್ಕೆ ಕರ್ವಾಚೌತ್ ಆಚರಿಸಿ ಬಳಿಕ ಊಟದಲ್ಲಿ ವಿಷ ಹಾಕಿದ ಪತ್ನಿ!
ಕೌಶಾಂಬಿ: ಗಂಡನ ಆಯಸ್ಸು ಹೆಚ್ಚಳಕ್ಕೆ ಆಚರಿಸಲಾಗುವ ಕರ್ವಾ ಚೌತ್ ವ್ರತ ಆಚರಿಸಿದ ಪತ್ನಿ, ಬಳಿಕ ಪತಿಗೆ ಹಬ್ಬದ ಊಟದಲ್ಲೇ ವಿಷ ಉಣಿಸಿ ಹತ್ಯೆಗೈದ ಭೀಕರ ಘಟನೆ ಉತ್ತರಪ್ರದೇಶದ ಇಸ್ಮಾಯಿಲ್ ಪುರದಲ್ಲಿ ನಡೆದಿದೆ. ಘಟನೆ ಸಂಬಂಧ ಸವಿತಾ ಎಂಬಾಕೆಯನ್ನು ಬಂಧಿಸಲಾಗಿದೆ. ಶೈಲೇಶ್ (32) ಎಂಬ ವ್ಯಕ್ತಿ ಭಾನುವಾರ ರಾತ್ರಿ ಕರ್ವಾ ಚೌತ್ ಹಬ್ಬದ ಊಟ ಸೇವಿಸಿದ ಬಳಿಕ ಕುಸಿದು ಬಿದ್ದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆತ ಸಾವನ್ನಪ್ಪಿದ್ದ. ಬಳಿಕ ಆತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಶೈಲೇಶ್‌ನ ಪತ್ನಿಯನ್ನು ವಿಚಾರಣೆ ನಡೆಸಿದಾಗ, ಆಕೆ ಆಹಾರದಲ್ಲಿ ವಿಷ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.