ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಗ್ಯಾಂಗ್‌ನಿಂದ ಹತರಾದ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಅವರ ತಾಯಿ ಗರ್ಭಿಣಿ ಆಗಿದ್ದಾರೆ.

ಅಮೃತಸರ: ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಗ್ಯಾಂಗ್‌ನಿಂದ ಹತರಾದ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಅವರ ತಾಯಿ ಗರ್ಭಿಣಿ ಆಗಿದ್ದಾರೆ. ಸಿಧು ಪೋಷಕರು ಮಾರ್ಚ್‌ನಲ್ಲಿ ಮಗುವನ್ನ ಸ್ವಾಗತ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

ಸಿಧು ಅವರ ತಂದೆ ಬಲ್‌ಕೋರ್‌ ಸಿಂಗ್‌ (60) ಹಾಗೂ ತಾಯಿ ಚರಣ್‌ ಸಿಂಗ್‌ (58) ಶೀಘ್ರದಲ್ಲಿ ನೂತನ ಮಗುವಿಗೆ ಪೋಷಕರಾಗಲಿದ್ದಾರೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ. 

ಆದರೆ ಚರಣ್‌ ಸಿಂಗ್‌ ಹಾಗೂ ಬಲಕೋರ್‌ ಯಾವುದೇ ಹೇಳಿಕೆ ನೀಡಿಲ್ಲ. ಸಿಧು ಮೂಸೇವಾಲಾ ಪಂಜಾಬಿನ ಖ್ಯಾತ ಗಾಯಕರಾಗಿದ್ದರು 2022ರಲ್ಲಿ ಪಂಜಾಬ್‌ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅದೇ ವರ್ಷ ಮೇ ತಿಂಗಳಿನಲ್ಲಿ ಗೋಲ್ಡಿ ಬ್ರಾರ್‌ ಗ್ಯಾಂಗ್‌ ನಡೆಸಿದ ದಾಳಿಯಲ್ಲಿ ಹತರಾದರು.