ಸಾರಾಂಶ
ಇಲ್ಲಿ ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ, ಸೀಮನ್ಸ್ ಕಂಪನಿ ಸಿಇಒ ಅಗಸ್ಟಿನ್ ಎಸ್ಕೊಬಾರ್ ಮೃತಪಟ್ಟಿದ್ದಾರೆ.
ನ್ಯೂಯಾರ್ಕ್: ಇಲ್ಲಿ ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ, ಸೀಮನ್ಸ್ ಕಂಪನಿ ಸಿಇಒ ಅಗಸ್ಟಿನ್ ಎಸ್ಕೊಬಾರ್ ಮೃತಪಟ್ಟಿದ್ದಾರೆ.ಮ್ಯಾನ್‌ಹಟ್ಟನ್ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ, ಬೆಲ್ 306 ಎಂಬ ಪ್ರವಾಸಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಹಡ್ಸನ್ ನದಿಯೊಳಗೆ ಬಿತ್ತು. ಅದರಲ್ಲಿ ಎಸ್ಕೋಬಾರ್, ಅವರ ಪತ್ನಿ ಮೆರ್ಸೆ ಕ್ಯಾಂಪ್ರುಬಿ ಮಾಂಟಲ್, ಅವರ 3 ಮಕ್ಕಳು ಹಾಗೂ ಪೈಲೆಟ್ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ.
ಕಳೆದವಷ್ಟೇ ಎಸ್ಕೊಬಾರ್ ಅವರು ಬೆಂಗಳೂರು, ಪುಣೆ, ಮುಂಬೈಗಳಲ್ಲಿನ ಸೀಮೆನ್ಸ್‌ನ ಕಚೇರಿಗಳಿಗೆ ಭೇಟಿ ನೀಡಿದ್ದು, ಆ ಪ್ರಯಾಣವನ್ನು ‘ಸ್ಫೂರ್ತಿದಾಯಕ’ ಎಂದು ಕರೆದಿದ್ದರು.