ಅಕ್ರಮವೆಸಗಿದರೆ ಆತ್ಮಹತ್ಯೆ: ರಕ್ತದಲ್ಲಿ ಮುಚ್ಚಳಿಕೆ ಬರೆದ ಬ್ಯಾಂಕ್‌ ಸಿಬ್ಬಂದಿ!

| Published : Nov 27 2024, 01:04 AM IST

ಅಕ್ರಮವೆಸಗಿದರೆ ಆತ್ಮಹತ್ಯೆ: ರಕ್ತದಲ್ಲಿ ಮುಚ್ಚಳಿಕೆ ಬರೆದ ಬ್ಯಾಂಕ್‌ ಸಿಬ್ಬಂದಿ!
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸು ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಪಾನ್‌ನ ಶಿಕೋಕು ಬ್ಯಾಂಕ್‌ ವಿಚಿತ್ರ ಹಾಗೂ ವಿಭಿನ್ನ ಕ್ರಮಕ್ಕೆ ಮುಂದಾಗಿದೆ.

ಟೋಕಿಯೋ: ಹಣಕಾಸು ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಪಾನ್‌ನ ಶಿಕೋಕು ಬ್ಯಾಂಕ್‌ ವಿಚಿತ್ರ ಹಾಗೂ ವಿಭಿನ್ನ ಕ್ರಮಕ್ಕೆ ಮುಂದಾಗಿದೆ. ಇದರ ಪ್ರಕಾರ ಬ್ಯಾಂಕಿನ ಎಲ್ಲಾ ಉದ್ಯೋಗಿಗಳಿಂದ, ‘ಅಕ್ರಮದಲ್ಲಿ ತೊಡಗಿದರೆ ಆ ಮೊತ್ತವನ್ನು ಕೈಯ್ಯಾರೆ ಭರಿಸಿ ನಂತರ ಆತ್ಮಹತ್ಯೆಗೆ ಶರಣಾಗುತ್ತೇವೆ’ ಎಂಬ ಪ್ರತಿಜ್ಞೆಗೆ ರಕ್ತದಲ್ಲಿ ಸಹಿ ಮಾಡಿಸಿಕೊಳ್ಳಲಾಗಿದೆ. ಈ ಪ್ರತಿಜ್ಞೆಯ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.

ಈಗಾಗಲೇ ಶಿಕೋಕು ಬ್ಯಾಂಕ್‌ನ ಪೂರ್ವವರ್ತಿಯಾದ ಥರ್ಟಿ- ಸವೆಂತ್‌ ನ್ಯಾಷನಲ್‌ ಬ್ಯಾಂಕ್‌ನ ಅಧ್ಯಕ್ಷ ಮಿಯುರಾ ಸೇರಿದಂತೆ ಸೇರಿದಂತೆ ಎಲ್ಲಾ 23 ಉದ್ಯೋಗಿಗಳು ಈ ಪ್ರತಿಜ್ಞೆಗೆ ಸಹಿ ಮಾಡಿರುವುದಾಗಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಮಾಹಿತಿ ನೀಡಿದೆ. ಜೊತೆಗೆ, ‘ಬ್ಯಾಂಕ್‌ ಉದ್ಯೋಗಿಯಾಗಿ ಮಾತ್ರವಲ್ಲದೆ ಸಮಾಜದಲ್ಲಿ ಒಬ್ಬರಾಗಿರುವ ನಮ್ಮ ನೈತಿಕತೆ ಮತ್ತು ಜವಾಬ್ದಾರಿಯನ್ನು ಇದು ಪ್ರತಿಬಿಂಬಿಸುತ್ತದೆ. ಅಂತೆಯೇ, ಇದನ್ನು ಶಿಕೋಕು ಬ್ಯಾಂಕ್‌ನ ಆಸ್ತಿಯಂತೆ ಮುಂದುವರೆಸಿಕೊಂಡು ಹೋಗಲಾಗುತ್ತದೆ’ ತಿಳಿಸಲಾಗಿದೆ.

ಬ್ಯಾಂಕ್‌ನ ಈ ನಿರ್ಧಾರದಿಂದ ಜನ ಬೆರಗಾಗಿದ್ದು, ಇದರಿಂದಲೇ ಆ ಬ್ಯಾಂಕ್‌ನಲ್ಲಿ ಅಷ್ಟೊಂದು ಹಣ ಇಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.