ಬೆಳ್ಳಿ ಬೆಲೆ ಏರಿಕೆಯ ನಾಗಲೋಟ ಮುಂದುವರೆದಿದ್ದು, ಮಂಗಳವಾರ ಪ್ರತಿ 1 ಕೆಜಿ ಬೆಳ್ಳಿ ಬೆಲೆ ದಾಖಲೆಯ 3.20 ಲಕ್ಷ ರು.ಗೆ ತಲುಪಿದೆ. ದೆಹಲಿಯಲ್ಲಿ ಬೆಳ್ಳಿ ಬೆಲೆ ಒಂದೇ ದಿನ 20400 ರು. ಏರಿಕೆ ಕಂಡು 3.23 ಲಕ್ಷ ರು.ಗೆ ತಲುಪಿದೆ.
ನವದೆಹಲಿ: ಬೆಳ್ಳಿ ಬೆಲೆ ಏರಿಕೆಯ ನಾಗಲೋಟ ಮುಂದುವರೆದಿದ್ದು, ಮಂಗಳವಾರ ಪ್ರತಿ 1 ಕೆಜಿ ಬೆಳ್ಳಿ ಬೆಲೆ ದಾಖಲೆಯ 3.20 ಲಕ್ಷ ರು.ಗೆ ತಲುಪಿದೆ. ದೆಹಲಿಯಲ್ಲಿ ಬೆಳ್ಳಿ ಬೆಲೆ ಒಂದೇ ದಿನ 20400 ರು. ಏರಿಕೆ ಕಂಡು 3.23 ಲಕ್ಷ ರು.ಗೆ ತಲುಪಿದೆ.
ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 5100 ರು. ಏರಿಕೆ
ಇನ್ನು ಬೆಂಗಳೂರಿನಲ್ಲಿ ಕೂಡಾ ಬೆಲೆ 15000 ರು. ಏರಿಕೆ ಕಂಡು 3.20 ಲಕ್ಷ ರು. ತಲುಪಿದೆ. ಮತ್ತೊಂದೆಡೆ ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 5100 ರು. ಏರಿಕೆ ಕಂಡು 10 ಗ್ರಾಂಗೆ 1,53,200 ರು.ಗೆ ತಲುಪಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನ 10 ಗ್ರಾಂಗೆ 3250 ರು.ಗೆ ಜಿಗಿದು 1,37,300 ರು.ಗೆ, 24 ಕ್ಯಾರಟ್ ಶುದ್ಧ ಚಿನ್ನ 10 ಗ್ರಾಂಗೆ 3540 ರು. ಏರಿ 1,49,780 ರು.ಗೆ ತಲುಪಿದೆ.
ಕಾರಣ:
ಜಾಗತಿಕ ಆರ್ಥಿಕ ಬಿಕ್ಕಟ್ಟು, ಇರಾನ್, ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ದಾಳಿಯ ಭೀತಿ, ಅಮೆರಿಕ- ಯುರೋಪ್ ನಡುವೆ ತೆರಿಗೆ ಸಮರದ ಕಾರಣ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಎನ್ನುವ ಚಿನ್ನ ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಮತ್ತೊಂದೆಡೆ ಕೈಗಾರಿಕಾ ವಲಯದಿಂದ ಬೆಳ್ಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು ಕೂಡಾ ಬೆಳ್ಳಿ ದರದ ನಾಗಾಲೋಟಕ್ಕೆ ಕಾರಣವಾಗಿದೆ.
