ಸಂಕ್ರಾಂತಿ ಹಬ್ಬದಂದು ಬೆಳ್ಳಿಯು ಹಬ್ಬದ ಸಿಹಿಯನ್ನು ಕಸಿದು, ಕಹಿ ಕೊಟ್ಟಿದೆ. ಬೆಂಗಳೂರಿನಲ್ಲಿ ಒಂದೇ ದಿನ 17800 ರು. ಜಿಗಿದು ಕೇಜಿಗೆ 2,96,800 ರು.ಗೆ ಏರಿಕೆ ಕಂಡಿದೆ. ಈ ಮೂಲಕ 3 ಲಕ್ಷ ಸನಿಹಕ್ಕೆ ದಾಪುಗಾಲಿರಿಸಿದೆ. ಈ ಮೂಲಕ 22 ದಿನಗಳಲ್ಲಿ 63500 ರು. ಭಾರಿ ಹೆಚ್ಚಳವಾಗಿದೆ.
- 17800 ರು. ಜಿಗುದು 2.96 ಲಕ್ಷಕ್ಕೆ ಏರಿಕೆ
- ಕಳೆದ 22 ದಿನದಲ್ಲಿ ₹63500 ಹೆಚ್ಚಳ---
ನವದೆಹಲಿ: ಸಂಕ್ರಾಂತಿ ಹಬ್ಬದಂದು ಬೆಳ್ಳಿಯು ಹಬ್ಬದ ಸಿಹಿಯನ್ನು ಕಸಿದು, ಕಹಿ ಕೊಟ್ಟಿದೆ. ಬೆಂಗಳೂರಿನಲ್ಲಿ ಒಂದೇ ದಿನ 17800 ರು. ಜಿಗಿದು ಕೇಜಿಗೆ 2,96,800 ರು.ಗೆ ಏರಿಕೆ ಕಂಡಿದೆ. ಈ ಮೂಲಕ 3 ಲಕ್ಷ ಸನಿಹಕ್ಕೆ ದಾಪುಗಾಲಿರಿಸಿದೆ. ಈ ಮೂಲಕ 22 ದಿನಗಳಲ್ಲಿ 63500 ರು. ಭಾರಿ ಹೆಚ್ಚಳವಾಗಿದೆ.ಮತ್ತೊಂದೆಡೆ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯು 1050 ರು. ಏರಿ 1,35,600 ರು. ಹಾಗೂ 24 ಕ್ಯಾರಟ್ ಚಿನ್ನ 1000 ರು. ಜಿಗಿದು 1,47,900 ರು.ಗೆ ಏರಿಕೆ ಕಂಡಿದೆ.
ಅದೇ ರೀತಿ ದೆಹಲಿಯಲ್ಲಿ ಕೇಜಿ ಬೆಳ್ಳಿ ಬೆಲೆಯು ಒಂದೇ ದಿನ 15,000 ರು. ಜಿಗಿದು 2.86 ಲಕ್ಷ ರು.ಗೆ ಹೆಚ್ಚಳವಾಗಿದೆ. 99.9 ಶುದ್ಧತೆಯ ಚಿನ್ನವು 1500 ರು. ಹೆಚ್ಚಳವಾಗಿ 10 ಗ್ರಾಂಗೆ 1,46,500 ರು.ಗೆ ತಲುಪಿದೆ.ಬೆಳ್ಳಿ ಬೆಲೆ (ಕೇಜಿಗೆ)ಡಿ.24: 2,33,300 ರು.
ಜ.14: 2,96,800 ರು.22 ದಿನದಲ್ಲಿ ಹೆಚ್ಚಳ: 63,500 ರು.