ಸಾರಾಂಶ
‘ತನ್ನ ಸ್ವಂತ ಕುಟುಂಬವನ್ನೇ ಒಡೆಯುವುದನ್ನು ಸಮಾಜವು ಇಷ್ಟ ಪಡುವುದಿಲ್ಲ’ ಎಂದು ಭಾನುವಾರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ಅಜಿತ್) ಬಣದ ಅಧ್ಯಕ್ಷ ಅಜಿತ್ ಪವಾರ್ ತಿಳಿಸಿದ್ದಾರೆ.
ಗಡ್ಚಿರೋಲಿ (ಮಹಾರಾಷ್ಟ್ರ): ‘ತನ್ನ ಸ್ವಂತ ಕುಟುಂಬವನ್ನೇ ಒಡೆಯುವುದನ್ನು ಸಮಾಜವು ಇಷ್ಟ ಪಡುವುದಿಲ್ಲ’ ಎಂದು ಭಾನುವಾರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ಅಜಿತ್) ಬಣದ ಅಧ್ಯಕ್ಷ ಅಜಿತ್ ಪವಾರ್ ತಿಳಿಸಿದ್ದಾರೆ.
ಸಮಾರಂಭವೊಂದರಲ್ಲಿ ಅವರು ಮಾತನಾಡಿ ಈ ಮಾತು ಹೇಳಿದರು.ಶರದ್ ಪವಾರ್ ಅವರ ಎನ್‌ಸಿಪಿಯಿಂದ ಹೊರಬಂದು ತಮ್ಮದೇ ಪಕ್ಷವನ್ನು ಸ್ಥಾಪಿಸಿ ಬಿಜೆಪಿ-ಶಿವಸೇನೆ ಜತೆ ಅಜಿತ್ ಸೇರಿಕೊಂಡು ಈ ಹಿಂದೆ ಉಪಮುಖ್ಯಮಂತ್ರಿ ಆಗಿದ್ದರು. ಆದರೆ ಇತ್ತೀಚೆಗೆ ಅಜಿತ್‌ಗೂ ಬಿಜೆಪಿ-ಶಿವಸೇನೆಗೂ ಸಂಬಂಧ ಸರಿಯಿಲ್ಲ. ಹಿಗಾಗಿ ಅಜಿತ್ ಮಾತು ನೋಡಿದರೆ ಅವರು ಆಡಳಿತಾರೂಢ ಮಹಾಯುತಿ ಕೂಟ ಬಿಟ್ಟು ಮತ್ತೆ ಎನ್‌ಸಿಪಿ (ಶರದ್ ಬಣ) ಸೇರುವ ಸಾಧ್ಯತೆಯಿದೆ ಎಂಬ ಊಹಾಪೋಹ ಹರಡಿದೆ.
ಇತ್ತೀಚೆಗೆ ಅಜಿತ್ ಅವರು ತನ್ನ ಸೋದರ ಸಂಬಂಧಿ ಎನ್‌ಸಿಪಿ (ಶರದ್) ನಾಯಕಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ನಿಲ್ಲಿಸಿ ದೊಡ್ಡ ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದರು.