2004ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆ ಸ್ವೀಕರಿಸಬೇಕೇ, ಬೇಡವೇ ಎಂಬ ನಿರ್ಧಾರದ ವೇಳೆ ‘ಅಧಿಕಾರದ ಸೆಳೆತ’ ಅನುಭವಿಸಿದ್ದೆ. ಪಕ್ಷಕ್ಕಾಗಿ ದೇಶಾದ್ಯಂತ ಪ್ರಚಾರ ನಡೆಸಿದ ಕಾರ್ಯಕರ್ತರಿಗಾಗಿ ಆ ಹುದ್ದೆ ಸ್ಪೀಕರಿಸುವುದು ನನ್ನ ಬಾಧ್ಯತೆ ಎಂದು ನಾನು ಭಾವಿಸಿದ್ದೆ. ಆದರೆ, ಒಮ್ಮೆ ಅಧಿಕಾರ ಸಿಕ್ಕರೆ ಅದನ್ನು ಉಳಿಸಿಕೊಳ್ಳಲು ನಾನಾ ಕಾರಣಗಳನ್ನು ಹುಡುಕುತ್ತೇವೆ ಎಂಬುದು ಅನುಭವದಿಂದ ಕಲಿತ ಪಾಠ. ಹೀಗಾಗಿ ಕೊನೆಗೆ ಪ್ರಧಾನಿ ಹುದ್ದೆ ನಿರಾಕರಿಸಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.
- ಒಮ್ಮೆ ಅಧಿಕಾರ ಸಿಕ್ಕರೆ ಅದನ್ನು ಬಿಡಲು ಕಾರಣ ಹುಡುಕುತ್ತೇವೆ
- ಇದು ಅನುಭವದಿಂದ ಕಲಿತ ಪಾಠ, ಹೀಗಾಗಿ ಹುದ್ದೆ ನಿರಾಕರಿಸಿದೆ- 2004ರ ಪ್ರಧಾನಿ ಹುದ್ದೆ ಗೊಂದಲ ಬಗ್ಗೆ ಸೋನಿಯಾ ಮಾತು
ನವದೆಹಲಿ: 2004ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆ ಸ್ವೀಕರಿಸಬೇಕೇ, ಬೇಡವೇ ಎಂಬ ನಿರ್ಧಾರದ ವೇಳೆ ‘ಅಧಿಕಾರದ ಸೆಳೆತ’ ಅನುಭವಿಸಿದ್ದೆ. ಪಕ್ಷಕ್ಕಾಗಿ ದೇಶಾದ್ಯಂತ ಪ್ರಚಾರ ನಡೆಸಿದ ಕಾರ್ಯಕರ್ತರಿಗಾಗಿ ಆ ಹುದ್ದೆ ಸ್ಪೀಕರಿಸುವುದು ನನ್ನ ಬಾಧ್ಯತೆ ಎಂದು ನಾನು ಭಾವಿಸಿದ್ದೆ. ಆದರೆ, ಒಮ್ಮೆ ಅಧಿಕಾರ ಸಿಕ್ಕರೆ ಅದನ್ನು ಉಳಿಸಿಕೊಳ್ಳಲು ನಾನಾ ಕಾರಣಗಳನ್ನು ಹುಡುಕುತ್ತೇವೆ ಎಂಬುದು ಅನುಭವದಿಂದ ಕಲಿತ ಪಾಠ. ಹೀಗಾಗಿ ಕೊನೆಗೆ ಪ್ರಧಾನಿ ಹುದ್ದೆ ನಿರಾಕರಿಸಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜತೆಗೆ ತಮ್ಮ ಆತ್ಮಕಥೆ ಕುರಿತ ಸಂವಾದದಲ್ಲಿ ಈ ವಿಚಾರ ಹಂಚಿಕೊಂಡ ಅವರು, 2004ರಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸುವಾಗ ಎದುರಿಸಿದ ಆಂತರಿಕ ಸಂಘರ್ಷಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಆ ಕುರಿತ ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದಾರೆ.
ಒಮ್ಮೆ ಅಮ್ಮ ಆಯ್ತು, ಇನ್ನೊಮ್ಮೆ ಬೇಡ ಎನ್ನುತ್ತಿದ್ದರು. ಇನ್ನೊಂದು ಕಡೆ ಪ್ರಧಾನಿ ಹುದ್ದೆಗೆ 7 ಮಂದಿ ರೇಸ್ನಲ್ಲಿದ್ದರು. ಅವರಲ್ಲಿ ಮನ್ಮೋಹನ್ ಸಿಂಗ್ ಸಮರ್ಥ ವ್ಯಕ್ತಿಯಾಗಿದ್ದರು. ಕೊನೆಗೆ ನನ್ನ ತಾಯಿ ಪ್ರಧಾನಿ ಹುದ್ದೆ ನಿರಾಕರಿಸಿದಾಗ ನಾವಿದ್ದ ರೂಮ್ನಲ್ಲಿ ಸಂಭ್ರಮ ಮನೆಮಾಡಿತ್ತು ಎಂದು ರಾಹುಲ್ ಮಾತುಕತೆ ವೇಳೆ ಹಂಚಿಕೊಂಡಿದ್ದಾರೆ.ಈ ವೇಳೆ ಸೋನಿಯಾ ಗಾಂಧಿ, ನನ್ನ ತಲೆಯಲ್ಲಿದ್ದ ಅಧಿಕಾರದ ಆಕರ್ಷಣೆಯನ್ನು ನೀವು ಬೇರೆಯೇ ರೀತಿ ವಿಶ್ಲೇಷಣೆ ಮಾಡಬಹುದು. ಆದರೆ ನಾನು ಆ ಹುದ್ದೆಯನ್ನು ಸ್ವೀಕರಿಸುವುದು ಪಕ್ಷಕ್ಕಾಗಿ ದೇಶಾದ್ಯಂತ ಪ್ರಚಾರ ನಡೆಸಿದ ಕಾರ್ಯಕರ್ತರ ಮೇಲಿನ ಋಣ ಎಂದು ಭಾವಿಸಿದ್ದೆ. ಯಾಕೆಂದರೆ ಪ್ರಚಾರದ ನೇತೃತ್ವವನ್ನು ನಾನೇ ವಹಿಸಿದ್ದೆ. ಹೀಗಾಗಿ ಕಾರ್ಯಕರ್ತರನ್ನು ಹೇಗೆ ನಿರಾಶೆಗೊಳಿಸಲಿ ಎಂಬ ಪ್ರಶ್ನೆಯೂ ನನ್ನ ತಲೆಯಲ್ಲಿ ಓಡಾಡುತ್ತಿತ್ತು ಎಂದರು.
=ನನ್ನ ತಂದೆ ಹತ್ಯೆ ಆಗಲೆಂದೇ
ಅವರ ಭದ್ರತೆ ವಾಪಸ್: ರಾಗಾ- ತಾಯಿ ಪುಸ್ತಕ ಕುರಿತು ಸೋದರಿ ಜತೆ ಚರ್ಚೆನವದೆಹಲಿ: ನನ್ನ ತಂದೆ ರಾಜೀವ್ ಗಾಂಧಿ ಅವರು ಹತ್ಯೆಗೀಡಾಗಲೆಂದೇ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಅವರ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯುವ ಮೂಲಕ ಅವರ ಹತ್ಯೆಗೆ ಪೂರಕವಾದ ವಾತಾವಣರವನ್ನು ನಿರ್ಮಿಸಲಾಗಿತ್ತು. ಅವರ ಭದ್ರತೆ ಕಡಿತ ಉದ್ದೇಶಪೂರ್ವಕ ಕೃತ್ಯ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್....’ ಕುರಿತು ಪ್ರಿಯಾಂಕಾ ಅವರೊಂದಿಗೆ ತಾವು ನಡೆಸಿದ ಮಾತುಕತೆಯ ವಿಡಿಯೋವೊಂದನ್ನು ರಾಹುಲ್ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅದರಲ್ಲಿ ಅವರು ಈ ಆರೋಪ ಮಾಡಿದ್ದಾರೆ.ವಿದೇಶದಿಂದ ಬಂದಿದ್ದ ನಾನು ತಂದೆಯ ಜತೆ ಬಿಹಾರದ ಚುನಾವಣಾ ಪ್ರಚಾರಕಕ್ಕೆ ತೆರಳಿದ್ದೆ. ಅಲ್ಲಿಂದ ವಾಪಸಾದ ಬಳಿಕ ಅವರು ತಂದೆಯ ಭದ್ರತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದೆ. ಈ ವಿಚಾರವಾಗಿ ತಾಯಿ, ತಂದೆ ಜತೆಗೂ ಮಾತನಾಡಿದ್ದೆ. ತಂದೆಯ ಜತೆಗೆ ವಾಗ್ವಾದವನ್ನೂ ನಡೆಸಿದ್ದೆ. ಅಲ್ಲದೆ ಸೋನಿಯಾ ಜತೆ ಈ ಬಗ್ಗೆ ಮಾತನಾಡುವಾಗ ತಂದೆಯ ಭದ್ರತೆಯ ವಿಚಾರವಾಗಿ ಕ್ರಮ ಕೈಗೊಳ್ಳದೇ ಹೋದರೆ ಶೀಘ್ರವೇ ನಾನು ಅವರ ಅಂತ್ಯಸಂಸ್ಕಾರಕ್ಕೆ ವಾಪಸಾಗಬೇಕಾಗಬಹುದು ಎಂದು ಎಚ್ಚರಿಸಿದ್ದೆ. ಮುಂದೆ ಅದೇ ರೀತಿ ಆಯ್ತು. ಕೆಲವೇ ತಿಂಗಳಿನಲ್ಲಿ ಚೆನ್ನೈನ ಶ್ರೀಪೆರಂಬದೂರು ಬಳಿ ಎಲ್ಟಿಟಿಇನಿಂದ ತಂದೆ ಹತ್ಯೆಗೀಡಾದರು. ನಾನು ಅಮೆರಿಕದಿಂದ ಅಂತ್ಯಸಂಸ್ಕಾರಕ್ಕೆ ವಾಪಸ್ ಆಗಬೇಕಾಯಿತು’ ಎಂದು ರಾಹುಲ್ ಹೇಳಿದ್ದಾರೆ.===ತುರ್ತುಪರಿಸ್ಥಿತಿ ವೇಳೆ ನಿನ್ನ
ಚಿಕ್ಕಪ್ಪ ಕಳ್ಳ ಎಂದವನಕೆನ್ನೆಗೆ ಏಟು: ಪ್ರಿಯಾಂಕಾ
ನವದೆಹಲಿ: ‘ತುರ್ತು ಪರಿಸ್ಥಿತಿ ಬಳಿಕ ಚಿಕ್ಕಪ್ಪನನ್ನು ಕಳ್ಳ ಎಂದು ರೇಗಿಸಿದ್ದ ಹುಡುಗನಿಗೆ ಕಪಾಳಮೋಕ್ಷ ಮಾಡಿದ್ದೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೆಲುಕು ಹಾಕಿಕೊಂಡಿದ್ದಾರೆ. ತಾಯಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜತೆಗಿನ ವಿಡಿಯೋವೊಂದನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ‘ತುರ್ತು ಪರಿಸ್ಥಿತಿ ಬಳಿಕ ದಾದಿ (ಇಂದಿರಾ ಗಾಂಧಿ) ಚುನಾವಣೆಯಲ್ಲಿ ಸೋತಾಗ ಬೇರೆಗೆ ಮನೆಗೆ ಹೋದೆವು. ಆ ಬಳಿಕ ನಾನು ಮೊದಲ ಬಾರಿಗೆ ಶಾಲೆಗೆ ಹೋದಾಗ ಒಬ್ಬ ಹುಡುಗ ನನ್ನ ಬಳಿ ನಿನ್ನ ಚಿಕ್ಕಪ್ಪ (ಸೋನಿಯಾ ಗಾಂಧಿ) ಜೈಲಿನಲ್ಲಿದ್ದಾರೆ. ಕಳ್ಳ ಎಂದಿದ್ದ. ಹಾಗಾಗಿ ನಾನು ಆತನ ಕೆನ್ನೆಗೆ ಬಾರಿಸಿದೆ’ ಎಂದು ಹೇಳಿಕೊಂಡಿದ್ದಾರೆ.