ಸಾರಾಂಶ
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಮಂಗಳವಾರ ತುರ್ತುಸ್ಥಿತಿ ಘೋಷಣೆಯ ಹೈಡ್ರಾಮಾ ನಡೆದಿದೆ. ಅಧ್ಯಕ್ಷ ಯೂನ್ ಯೆಲ್ ಸಂಜೆ ಮಾತನಾಡಿ, ‘ಕಮ್ಯುನಿಸ್ಟ್ ಶಕ್ತಿಗಳಿಂದ ದೇಶ ರಕ್ಷಿಸಲು ತುರ್ತು ಸಮರ ಕಾನೂನು ಜಾರಿ ಮಾಡಲಾಗುತ್ತಿದೆ’ ಎಂದು ಘೋಷಿಸಿ, ‘ವೈರಿ ದೇಶ ಉ. ಕೊರಿಯಾ ಜತೆ ವಿಪಕ್ಷಗಳು ಶಾಮೀಲಾಗಿರುವ ಕಾರಣ ಇದು ಅಗತ್ಯ’ ಎಂದು ಗುಡುಗಿ ಸಂಸತ್ ಬಂದ್ ಮಾಡಿಸಿದ್ದರು. ಆದರೆ ಬಳಿಕ, ಸಂಸತ್ತಿಗೆ ಹಾಕಿದ್ದ ಭದ್ರತೆ ಭೇದಿಸಿ ಒಳನುಗ್ಗಿದ ಸಂಸದರು 190-0 ಮತದಿಂದ ತುರ್ತುಸ್ಥಿತಿ ನಿಲುವಳಿಯನ್ನು ಸೋಲಿಸಿದರು.ಏನಿದು ತುರ್ತುಪರಿಸ್ಥಿತಿ?ಮಾರ್ಷಲ್ ಲಾ (ಸಮರ ಕಾನೂನು ಅಥವಾ ತುರ್ತು ಸ್ಥಿತಿ) ಪ್ರಕಾರ, ಕೊರಿಯಾದಲ್ಲಿ ಮಂಗಳವಾರ ನಾಗರಿಕರ ಸ್ವಾತಂತ್ರ್ಯದ ಮೇಲೆ, ಎಲ್ಲ ರಾಜಕೀಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿ ಸಂಸತ್ತನ್ನು ಬಂದ್ ಮಾಡಲಾಗಿತ್ತು. ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗಿತ್ತು. ಎಲ್ಲ ವೈದ್ಯರು, ಸರ್ಕಾರಿ ನೌಕರರು ರಜೆ ಕಡಿತಗೊಳಿಸಿ ಕೆಲಸ ಮಾಡಲು ಸೂಚಿಸಲಾಗಿತ್ತು. ಇದನ್ನು ಉಲ್ಲಂಘಿಸಿದವರಿಗೆ ಕಠಿಣ ಸಜೆ ವಿಧಿಸುವ ಆದೇಶ ಹೊರಡಿಸಲಾಗಿತ್ತು.