ಕರಸೇವಕರ ಮೇಲೆ ನಡೆದ ಗುಂಡಿನ ದಾಳಿ ಸರಿ ಇದೆ ಎಂದ ಕೇಶವ್‌ ಪ್ರಸಾದ್‌ ಮೌರ್ಯ

| Published : Jan 11 2024, 01:30 AM IST / Updated: Jan 11 2024, 11:04 AM IST

ಕರಸೇವಕರ ಮೇಲೆ ನಡೆದ ಗುಂಡಿನ ದಾಳಿ ಸರಿ ಇದೆ ಎಂದ ಕೇಶವ್‌ ಪ್ರಸಾದ್‌ ಮೌರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾಬ್ರಿ ಮಸೀದಿ ಧ್ವಂಸದ ವೇಳೆ ಪೊಲೀಸರು ಕರಸೇವಕರ ಮೇಲೆ ನಡೆಸಿದ ಬಾಂಬ್‌ ದಾಳಿಯನ್ನು ಸಮರ್ಥಿಸುವ ಮೂಲಕ ಸಮಾಜವಾದಿ ಪಕ್ಷದ ನಾಯಕ ಕೇಶವ್‌ ಪ್ರಸಾದ್‌ ಮೌರ್ಯ ವಿವಾದ ಸೃಷ್ಟಿಸಿದ್ದಾರೆ.

ಖಾಸ್ಗಂಜ್‌: ಭಾರಿ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಈ ಬಾರಿ 1990ರಲ್ಲಿ ಕರಸೇವಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ಸರಿ ಇದೆ ಎಂದು ಮೌರ್ಯ ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮೌರ್ಯ,‘1990ರಲ್ಲಿ ಕರಸೇವಕರು ಕಾನೂನು ಸುವ್ಯವಸ್ಥೆಗೆ ಧಕ್ಕೆತಂದಿದ್ದರು.

ಇದನ್ನು ತಡೆವ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಕರಸೇವಕರ ಮೇಲೆ ಗುಂಡಿನ ದಾಳಿ ಮಾಡಲು ಆದೇಶಿಸಿದರು. ಈ ಮೂಲಕ ಸಂವಿಧಾನವನ್ನು ಉಳಿಸಿದರು. ಆದರೆ ಬಿಜೆಪಿ ವಿನಾಕಾರಣ ರಾಜಕಾರಣ ಮಾಡುತ್ತಿದೆ’ ಎಂದು ಮೌರ್ಯ ಕಿಡಿಕಾರಿದರು.