ಸಾರಾಂಶ
475 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಜೋಡಿಸುವ ಐತಿಹಾಸಿಕ ಪ್ರಕ್ರಿಯೆಗೆ ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ, ಈ ಹಾದಿಯಲ್ಲಿ ಭಾನುವಾರ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ.
ಬೆಂಗಳೂರು: 475 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಜೋಡಿಸುವ ಐತಿಹಾಸಿಕ ಪ್ರಕ್ರಿಯೆಗೆ ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ, ಈ ಹಾದಿಯಲ್ಲಿ ಭಾನುವಾರ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ.
ತಲಾ 220 ಕೆಜಿ ತೂಗುವ ಸ್ಪೇಡೆಕ್ಸ್ 1 ಮತ್ತು ಸ್ಪೇಡೆಕ್ಸ್ 2 ನೌಕೆಗಳನ್ನು ಪರಸ್ಪರ ಕೇವಲ 3 ಮೀಟರ್ ಸನಿಹಕ್ಕೆ ತರುವ ಪರೀಕ್ಷೆಯನ್ನು ಇಸ್ರೋ ಭಾನುವಾರ ಯಶಸ್ವಿಯಾಗಿದೆ ನಡೆಸಿದೆ. ಇದರ ಮುಂದಿನ ಭಾಗವಾಗಿ ಎರಡೂ ನೌಕೆಗಳನ್ನು ಜೋಡಿಸುವ ಅಂದರೆ ಡಾಕಿಂಗ್ ಮಾಡುವ ಮತ್ತು ಬಳಿಕ ಬೇರ್ಪಡಿಸುವ (ಅನ್‌ಡಾಕಿಂಗ್) ಪ್ರಕ್ರಿಯೆ ನಡೆಸಲಿದೆ.ಈ ಕುರಿತು ಭಾನುವಾರ ಮಾಹಿತಿ ನೀಡಿರುವ ಇಸ್ರೋ, ‘ಎರಡು ನೌಕೆಗಳನ್ನು ಪರಸ್ಪರ 15 ಮೀಟರ್ ಅಂತರಕ್ಕೆ ತರುವ ಬಳಿಕ 3 ಮೀಟರ್ ಅಂತರಕ್ಕೆ ತರುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬಳಿಕ ನೌಕೆಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮತ್ತೆ ಸ್ವಲ್ಪ ದೂರದ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಭಾನುವಾರ ನಡೆಸಿದ ಪ್ರಯೋಗದ ಅಂಕಿ ಅಂಶಗಳನ್ನು ಪರಿಶೀಲಿಸಿ ಶೀಘ್ರ ಡಾಕಿಂಗ್ ಪ್ರಕ್ರಿಯೆ ನಡೆಸಲಾಗುವುದು’ ಎಂದು ಹೇಳಿದೆ.
ಒಂದು ವೇಳೆ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾದರೆ, ಇಂಥ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶವಾಗುವುದರ ಜೊತೆಗೆ ಅತ್ಯಂತ ಮಿತವ್ಯಯಿ ಉಡ್ಡಯನದ ದಾಖಲೆಗೂ ಇಸ್ರೋ ಪಾತ್ರವಾಗಲಿದೆ.;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))