ಸಾರಾಂಶ
ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ಪಂಢರಾಪುರಕ್ಕೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆ ವಲಯವೂ ನಿರ್ಧರಿಸಿದೆ.
ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ಪಂಢರಾಪುರಕ್ಕೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆ ವಲಯವೂ ನಿರ್ಧರಿಸಿದೆ. ಜೂ. 26, 28 ಮತ್ತು 29ರಂದು ಬೆಂಗಳೂರು-ಪಂಢರಾಪುರ (ರೈಲು ಸಂಖ್ಯೆ- 06501/06503) ಹಾಗೂ 27 ಮತ್ತು 30ರಂದು ಪಂಢರಾಪುರ-ಬೆಂಗಳೂರು (ರೈಲು ಸಂಖ್ಯೆ- 06502/06504) ರೈಲು ಸಂಚರಿಸಲಿವೆ.
26, 28 ಮತ್ತು 29ರಂದು ಸಂಜೆ 5.30ಕ್ಕೆ ಬಿಡಲಿರುವ ರೈಲು ಮರುದಿನ ಬೆಳಗ್ಗೆ 11.35ಕ್ಕೆ ಪಂಢರಾಪುರಕ್ಕೆ ತಲುಪಲಿದೆ. 27 ಮತ್ತು 30ರಂದು ಪಂಢರಾಪುರದಿಂದ ಸಂಜೆ 6.30ಕ್ಕೆ ಹೊರಟು, ಮರುದಿನ ಬೆಳಗ್ಗೆ 11.30ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಅದೇ ರೀತಿ (ರೈಲು ಸಂಖ್ಯೆ 06505) ಜೂ.30 ರಂದು ಬೆಂಗಳೂರಿನಿಂದ ರಾತ್ರಿ 10ಕ್ಕೆ ಹೊರಟು, ಮರುದಿನ ಸಂಜೆ 4.30ಕ್ಕೆ ಪಂಢರಪುರ ತಲುಪುತ್ತದೆ. ಜು. 1ರಂದು ಇದೇ ರೈಲು (ಸಂಖ್ಯೆ0 06506) ಪಂಢರಪುರದಿಂದ ಸಂಜೆ 6.30ಕ್ಕೆ ಹೊರಟು, ಮರುದಿನ 11.30ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲುಗಳು ತುಮಕೂರು, ಗೌರಿಬಿದನೂರ, ಬಾಣಸಂದ್ರ, ತಿಪಟೂರ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಲೋಂಡಾ ಮಾರ್ಗವಾಗಿ ಪಂಢರಪುರ ತಲುಪಲಿದೆ. 20 ಕೋಚ್‌ಗಳನ್ನು ಈ ರೈಲುಗಳು ಹೊಂದಲಿವೆ ಎಂದು ಪ್ರಕಟಣೆ ತಿಳಿಸಿದೆ.