ಸಾರಾಂಶ
ನವದೆಹಲಿ: ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮತ್ತೆ ಅಸ್ವಸ್ಥರಾಗಿದ್ದು ಮೊಹಾಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಮಾನ್ ಹೀಗೆ ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು ಮೂರನೇ ಬಾರಿ. ಆದರೆ ಅವರ ಆರೋಗ್ಯದ ಬಗ್ಗೆ ಆಮ್‌ಆದ್ಮಿ ಪಕ್ಷ ಇದುವರೆಗೂ ತುಟಿಬಿಚ್ಚಿಲ್ಲ. ಇದು ಸಾಕಷ್ಟು ವದಂತಿಗಳಿಗೆ, ಊಹಾಪೋಹಗಳಿಗೆ ಕಾರಣವಾಗಿದೆ.
ಈ ನಡುವೆ ಅಕಾಲಿದಳ ಪಕ್ಷದ ನಾಯಕ ಬಿಕ್ರಂ ಸಿಂಗ್ ಮಜೀಥಿಯಾ, ಮಾನ್ ಯಕೃತ್‌ನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ತಕ್ಷಣವೇ ಯಕೃತ್ ಬದಲಾವಣೆ ಚಿಕಿತ್ಸೆ ಅಗತ್ಯವಿದೆ ಎಂದಿದ್ದಾರೆ. ಜೊತೆಗೆ ಮಾನ್ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ಕಾರಣ ಅವರ ಆರೋಗ್ಯದ ಬಗ್ಗೆ ತಿಳಿಯುವ ಹಕ್ಕು ಜನರಿಗಿದೆ ಎಂದು ಹೇಳಿದ್ದಾರೆ. ಸದ್ಯ ಮಾನ್ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಭಾರಿ ವಾಯುದಾಳಿ
ಬೈರೂತ್: ಶುಕ್ರವಾರ ಸಂಜೆ ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಹಿಜ್ಬುಲ್ಲಾ ಉಗ್ರರ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಭಾರಿ ವಾಯುದಾಳಿ ನಡೆದಿದೆ. 4 ಕಟಟಡಗಳು ಧ್ವಂಸಗೊಂಡಿವೆ ಎಂದು ಖುದ್ದು ಇದ್ರೇಲ್ ಹೇಳಿದೆ.ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ನಂತರ ಈ ಭಾರಿ ದಾಳಿ ನಡೆದಿದ್ದು, ಬೈರೂತ್‌ನಲ್ಲಿ ಭಾರಿ ದಟ್ಟ ಹೊಗೆ ಆವರಿಸಿದೆ.