ಮುಂದಿನ 5 ವರ್ಷದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪರ್ವ: ಮೋದಿ

| Published : Mar 12 2024, 02:04 AM IST

ಮುಂದಿನ 5 ವರ್ಷದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪರ್ವ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ವರ್ಷ ದೇಶಾದ್ಯಂತ 10 ಲಕ್ಷ ಕೋಟಿ ರು.ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಾಗಿದೆ.

ಗುರುಗ್ರಾಮ: ಪ್ರಸಕ್ತ ವರ್ಷ ದೇಶಾದ್ಯಂತ 10 ಲಕ್ಷ ಕೋಟಿ ರು.ಮೌಲ್ಯದ ಮೂಲಸೌಕರ್ಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಾಗಿದೆ. ಈ ಪೈಕಿ ಹಲವು ಯೋಜನೆಗಳಿಗೆ ಚಾಲನೆ ನೀಡಲು ಹೋಗಲೂ ಸಮಯವಿಲ್ಲದಾಗಿದೆ. ಇದಲ್ಲದೆ, ತಮ್ಮ 3ನೇ ಅವಧಿಯ 5 ವರ್ಷದಲ್ಲಿ ದೇಶವು ಮೂಲಸೌಕರ್ಯ ಅಭಿವೃದ್ಧಿ ಪರ್ವವನ್ನೇ ಕಾಣಲಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.1 ಲಕ್ಷ ಕೋಟಿ ರು.ಮೌಲ್ಯದ 114 ರಾಷ್ಟ್ರೀಯ ಹೆದ್ದಾರಿಗಳಿಗೆ ಶಂಕು, ಚಾಲನೆ ನೀಡಿ ಸೋಮವಾರ ಇಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ 5 ವರ್ಷದಲ್ಲಿ ದೇಶವನ್ನು ವಿಶ್ವದಲ್ಲೇ 3ನೇ ಅತಿದೊಡ್ಡ ಅರ್ಥಿಕತೆಯನ್ನಾಗಿ ಮಾಡಲು ನಮ್ಮ ಸರ್ಕಾರ ಮೂಲಸೌಕರ್ಯ ಯೋಜನೆಗಳಿಗೆ ಭಾರೀ ವೇಗ ನೀಡಿದೆ ಎಂದು ಹೇಳಿದರು.ಇದೇ ವೇಳೆ, ‘ನಮ್ಮ ಸರ್ಕಾರ ದೇಶದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ನೀಡುತ್ತಿರುವ ವೇಗ ನೋಡಿ ಕಾಂಗ್ರೆಸ್‌ ಮತ್ತು ಅದರ ಘಮಂಡಿ ಮಿತ್ರಪಕ್ಷಗಳಿಗೆ ನಿದ್ದೆ ಹಾರಿ ಹೋಗಿದೆ’ ಎಂದು ಮೋದಿ ವ್ಯಂಗ್ಯವಾಡಿದರು.

ದ್ವಾರಕಾ ಎಕ್ಸ್‌ಪ್ರೆಸ್‌ ವೇ:ಈ ನಡುವೆ ದೆಹಲಿಯ ವಾಹನ ದಟ್ಟಣೆ ಕಡಿಮೆ ಮಾಡಲು ನೆರವಾಗಲಿರುವ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮಾರ್ಗ ಮಧ್ಯೆ ಹರ್ಯಾಣದಲ್ಲಿ ಬರುವ ಹೆದ್ದಾರಿಯನ್ನು ಪ್ರಧಾನಿ ಮೋದಿ ಸೋಮವಾರ ಉದ್ಘಾಟಿಸಿದರು.

ದ್ವಾರಕಾ ಎಕ್ಸ್‌ಪ್ರೆಸ್‌ನ ಒಟ್ಟು 29 ಕಿ.ಮೀ ಉದ್ದದಲ್ಲಿ 18.9 ಕಿ.ಮೀ ಹರ್ಯಾಣ ವ್ಯಾಪ್ತಿಯಲ್ಲಿ ಮತ್ತು 10.1 ಕಿ.ಮೀ ದೆಹಲಿ ವ್ಯಾಪ್ತಿಯಲ್ಲಿ ಬರುತ್ತದೆ.