ಸಾರಾಂಶ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮಂಗಳವಾರ ಕೇಂದ್ರ ಬಜೆಟ್‌ನ ಕೆಲವು ಘೋಷಣೆಗಳಿಗೆ ಪ್ರತಿಕ್ರಿಯೆ ಭಾರೀ ಕುಸಿತ ಕಂಡಿತ್ತಾದರೂ, ಕೊನೆಗೆ ಚೇತರಿಕೆ ಕಂಡಿತು.250 ಅಂಕಗಳ ಏರಿಕೆಯೊಂದಿಗೆ ಬೆಳಗ್ಗೆ ಆರಂಭಗೊಂಡಿದ್ದ ಸೆನ್ಸೆಕ್ಸ್, ಮಧ್ಯಂ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮಂಗಳವಾರ ಕೇಂದ್ರ ಬಜೆಟ್‌ನ ಕೆಲವು ಘೋಷಣೆಗಳಿಗೆ ಪ್ರತಿಕ್ರಿಯೆ ಭಾರೀ ಕುಸಿತ ಕಂಡಿತ್ತಾದರೂ, ಕೊನೆಗೆ ಚೇತರಿಕೆ ಕಂಡಿತು.
250 ಅಂಕಗಳ ಏರಿಕೆಯೊಂದಿಗೆ ಬೆಳಗ್ಗೆ ಆರಂಭಗೊಂಡಿದ್ದ ಸೆನ್ಸೆಕ್ಸ್, ಮಧ್ಯಂತರದ ವೇಳೆಗೆ ಬಜೆಟ್‌ನಲ್ಲಿ ಫ್ಯೂಚರ್ ಆ್ಯಂಡ್ ಆಪ್ಷನ್‌ನ ತೆರಿಗೆ ಹೆಚ್ಚಳ, ಶಾರ್ಟ್-ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೆಚ್ಚಳದ ಸುದ್ದಿ ಬೆನ್ನಲ್ಲೇ 1277 ಅಂಕಗಳವರೆಗೆ ಕುಸಿತ ಕಂಡಿತ್ತು. ಪರಿಣಾಮ ಸೂಚ್ಯಂಕ 79224 ಅಂಕಗಳವರೆಗೆ ಕುಸಿತ ಕಂಡಿತ್ತು.
ಆದರೆ ದಿನದಂತ್ಯಕ್ಕೆ ಕೆಲವು ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿತದ ಸುದ್ದಿಯಿಂದಾಗಿ, ಕುಸಿತದ ಪ್ರಮಾಣದಿಂದ ಗಮನಾರ್ಹ ಪ್ರಮಾಣದಲ್ಲಿ ಚೇತರಿಸಿಕೊಂಡ ಸೆನ್ಸೆಕ್ಸ್ 73 ಅಂಕ ಕುಸಿತದೊಂದಿಗೆ 80429 ಅಂಕಗಳಲ್ಲಿ ಮುಕ್ತಾಯಗೊಂಡಿತು. ಇನ್ನೊಂದೆಡೆ ನಿಫ್ಟಿ ಕೂಡಾ 30 ಅಂಕ ಕುಸಿದು 24479 ಅಂಕಗಳಲ್ಲಿ ಅಂತ್ಯವಾಯಿತು.