ಸ್ನೇಹಿತನ ಅಮಾನತಿಗೆ ಬೇಸರಗೊಂಡು ವಿದ್ಯಾರ್ಥಿಯಿಂದ ಪ್ರಾಧ್ಯಾಪಕರಿಗೆ ಚಾಕು ಇರಿತ

| Published : Jan 19 2024, 01:46 AM IST

ಸ್ನೇಹಿತನ ಅಮಾನತಿಗೆ ಬೇಸರಗೊಂಡು ವಿದ್ಯಾರ್ಥಿಯಿಂದ ಪ್ರಾಧ್ಯಾಪಕರಿಗೆ ಚಾಕು ಇರಿತ
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ಕೊಚ್ಚಿಯ ಮಹಾರಾಜ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಹ ಪ್ರಾಧ್ಯಾಪಕರೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ.

ಕೊಚ್ಚಿ: ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಪ್ರಾಧ್ಯಾಪಕರಿಗೆ ಹಿಂದಿನಿಂದ ಬಂದು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಗರದ ಮಹಾರಾಜ ಕಾಲೇಜಿನಲ್ಲಿ ನಡೆದಿದೆ.

ಮಹಾರಾಜ ಕಾಲೇಹಿನ ಅರೇಬಿಕ್‌ ಸಂಶೋಧನಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ. ನಿಜಾ಼ಮುದ್ದೀನ್‌ ಬಳಿ ಮೊಹಮ್ಮದ್‌ ರಶೀದ್‌ ಎಂಬ ವಿದ್ಯಾರ್ಥಿಯು, ತನ್ನ ಸ್ನೇಹಿತನ ಅಮಾನತು ಮಾಡಿರುವುದರ ಕುರಿತು ವಾಗ್ವಾದ ನಡೆಸಿದ್ದಾನೆ.

ಮಾತಿನ ನಡುವೆ ಹಿಂದಿನಿಂದ ಸಹ ಪ್ರಾಧ್ಯಾಪಕರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಜಾ಼ಮುದ್ದೀನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಶೀದ್‌ ಪತ್ತೆಗೆ ಬಲೆ ಬೀಸಿದ್ದಾರೆ.