ಸಾರಾಂಶ
ಸೂಳೂರು ವಾಯುನೆಲೆಯಲ್ಲಿ ಪೈಲಟ್ ಆಗಿದ್ದ ಪತಿ ಕುಲ್‌ದೀಪ್ ಸಿಂಗ್ ಮೃತಪಟ್ಟ ಬಳಿಕ ಆತನ ಪತ್ನಿ ಯಾಶ್ವಿನಿ ಧಾಕಾ ತರಬೇತಿ ಪೂರ್ಣಗೊಳಿಸಿ ಸೇನಾಧಿಕಾರಿಯಾಗಿ ನಿಯುಕ್ತಿಯಾಗಿದ್ದಾರೆ.
ಚೆನ್ನೈ: ಭಾರತದ ಮೊದಲ ತ್ರಿವಳಿ ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಜ। ಬಿಪಿನ್ ರಾವತ್ ಜೊತೆಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ ಅವರ ಪತ್ನಿ ಯಾಶ್ವಿನಿ ಧಾಕಾ ಶನಿವಾರ ಸೇನಾಪಡೆ ಸೇರ್ಪಡೆ ಆಗಿದ್ದಾರೆ.
ಯಾಶ್ವಿನಿ ಸೇರಿ 184 ಮಂದಿ ಇಲ್ಲಿನ ಸೇನಾಧಿಕಾರಿಗಳ ತರಬೇತಿ ಶಾಲೆಯಲ್ಲಿ ತರಬೇತಿ ಮುಗಿಸಿ ಅಧಿಕಾರಿಗಳಾಗಿ ಶನಿವಾರ ನಿಯುಕ್ತಿ ಹೊಂದಿದ್ದಾರೆ. ಬಿಪಿನ್ ರಾವತ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಚಾಲನೆ ಮಾಡುತ್ತಿದ್ದ ಸೂಳೂರು ವಾಯುನೆಲೆ ಪೈಲಟ್, ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ, ಡಿ.8, 2021ರಂದು ತಮಿಳುನಾಡಿನಲ್ಲಿ ಸಂಭವಿಸಿದಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು.