ಸಾರಾಂಶ
ಸುಧಾಮೂರ್ತಿಯನ್ನು ರಾಜ್ಯಸಭೆಗೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರಪತಿಗಳು ನಾಮ ನಿರ್ದೇಶನ ಮಾಡಿದ್ದು, ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಭಾರತದ ರ್ಶರೀಮಂತ ಸಂಸದೆಯಾಗಲಿದ್ದಾರೆ.
ನವದೆಹಲಿ: ಸುಧಾಮೂರ್ತಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆಯಾಗಲಿದ್ದಾರೆ.
ಅವರು 5586 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ಫೋಸಿಸ್‌ನಲ್ಲಿ ಅವರಿಗೆ 3.45 ಕೋಟಿ ಷೇರು ಇದೆ.
ಗುರುವಾರ ಇನ್ಫೋಸಿಸ್‌ನ ಪ್ರತಿ ಷೇರಿನ ಬೆಲೆ 1617 ರು. ಇತ್ತು. ಅದರ ಆಧಾರದಲ್ಲಿ ಸುಧಾ ಅವರ ಒಟ್ಟು ಆಸ್ತಿ 5586 ಕೋಟಿ ರು. ಆಗಲಿದೆ.
ಇನ್ನು ಇನ್ಫೋಸಿಸ್‌ನಲ್ಲಿ ಸಂಸ್ಥಾಪಕ ನಾರಾಯಣ ಮೂರ್ತಿ 2691 ಕೋಟಿ ರು. ಮೌಲ್ಯದ 1.66 ಕೋಟಿ ಷೇರು ಹೊಂದಿದ್ದಾರೆ.
ಬಿಆರ್‌ಎಸ್ ಪಕ್ಷದ ಬಂಡಿ ಪಾರ್ಥಸಾರಥಿ ರೆಡ್ಡಿ 5300 ಕೋಟಿ ರು.ನೊಂದಿಗೆ ಇದುವರೆಗೂ ದೇಶದ ಅತ್ಯಂತ ಶ್ರೀಮಂತ ಸಂಸದರಾಗಿದ್ದರು.