ಕ್ರಿಮಿನಲ್‌ ಅಭ್ಯರ್ಥಿಗಳ ಚಿಹ್ನೆ ಕೈಕೋಳ: ಸುಪ್ರೀಂನಿಂದ ಅರ್ಜಿ ವಜಾ

| Published : Feb 03 2024, 01:48 AM IST

ಕ್ರಿಮಿನಲ್‌ ಅಭ್ಯರ್ಥಿಗಳ ಚಿಹ್ನೆ ಕೈಕೋಳ: ಸುಪ್ರೀಂನಿಂದ ಅರ್ಜಿ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಮಿನಲ್‌ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಚಿಹ್ನೆಯಾಗಿ ಕೈಕೋಳ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ನವದೆಹಲಿ: ಚುನಾವಣೆಗೆ ಸ್ಪರ್ಧಿಸಲು ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳಿಗೆ ಕೈಕೋಳದ ಚಿಹ್ನೆ ನೀಡಬೇಕು ಎಂದು ಕೋರಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಇದು ಚುನಾವಣಾ ನೀತಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಅರ್ಜಿ ಪುರಸ್ಕರಿಸುವ ಇಚ್ಛೆಯನ್ನು ನ್ಯಾಯಾಲಯ ಹೊಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ‘ಇದು ಚುನಾವಣಾ ನೀತಿ ಸಂಹಿತೆಯ ವಿಷಯ, ನಾವು ಹೇಗೆ ಭಾಗವಹಿಸಲು ಸಾಧ್ಯ? ಕೈಕೋಳವನ್ನು ಚುನಾವಣಾ ಚಿಹ್ನೆಯಾಗಿ ಬಳಸುವಂತೆ ನಾವು ಹೇಳಲಾಗುವುದಿಲ್ಲ, ನೀವು ಅರ್ಜಿ ಹಿಂಪಡೆಯಿರಿ’ ಎಂದು ನ್ಯಾ। ಜೆ.ಬಿ.ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ಪೀಠ ಹೇಳಿತು.