ಸಿಎಂ ಸ್ಥಾನದಿಂದ ಕೇಜ್ರಿ ಕೆಳಗಿಳಿಸಲು ಕಾನೂನಲ್ಲಿ ಅವಕಾಶ ಇಲ್ಲ: ಸುಪ್ರೀಂ

| Published : May 14 2024, 01:03 AM IST / Updated: May 14 2024, 04:55 AM IST

arvind kejriwal
ಸಿಎಂ ಸ್ಥಾನದಿಂದ ಕೇಜ್ರಿ ಕೆಳಗಿಳಿಸಲು ಕಾನೂನಲ್ಲಿ ಅವಕಾಶ ಇಲ್ಲ: ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅನರ್ಹಗೊಳಿಸಲು ಸುಪ್ರೀಂ ಕೋರ್ಟ್‌ಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದೆ.

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಸಿಎಂ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

‘ಇದು ದೆಹಲಿ ರಾಜ್ಯಪಾಲರಿಗೆ ಸಂಬಂಧಿಸಿದ್ದು. ಅವರು ವಜಾಗೊಳಿಸಬೇಕು ಅಂತಿದ್ದರೆ ಮಾಡಬಹುದು. ಆದರೆ ನಾವು ಮಧ್ಯಪ್ರವೇಶಿಸುವುದಕ್ಕೆ ಸಾಧ್ಯವಿಲ್ಲ.

ಇದು ಔಚಿತ್ಯದ ವಿಷಯವಾಗಿದೆ.

ಆದರೆ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬಳಿಕ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಲು ಕಾನೂನಿನಲ್ಲಿ ಯಾವುದೇ ಹಕ್ಕಿಲ್ಲ’ ಎಂದು ಸುಪ್ರೀಂ ಹೇಳಿದೆ.