ಸಾರಾಂಶ
ಕೋಲ್ಕತಾದ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ಕಲ್ಕತಾ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.
ನವದೆಹಲಿ: ಕೋಲ್ಕತಾದ ಪ್ರತಿಷ್ಠಿತ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಆ.9ರಂದು ಸಂಭವಿಸಿದ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಧೋರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಲ್ಕತಾ ಹೈಕೋರ್ಟ್ ಇತ್ತೀಚೆಗೆ ತಾನೇ ಪ್ರಕರಣವನ್ನು ನೇರವಾಗಿ ಸಿಬಿಐಗೆ ವರ್ಗಾಯಿಸಿತ್ತು. ಹೈಕೋರ್ಟ್, ಮಧ್ಯಪ್ರವೇಶ ಮಾಡಿರುವ ಪ್ರಕರಣದಲ್ಲಿ ಅಗತ್ಯವಿಲ್ಲದ ಹೊರತೂ ಸುಪ್ರೀಂಕೋರ್ಟ್ ತಾನೂ ಮಧ್ಯಪ್ರವೇಶ ಮಾಡುವುದು ತೀರಾ ಅಪರೂಪದ ಬೆಳವಣಿಗೆ. ಹೀಗಾಗಿಯೇ ಸುಪ್ರೀಂಕೋರ್ಟ್ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಘಟನೆ ಕುರಿತು ಭಾನುವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್ ಮಂಗಳವಾರ ವಿಚಾರಣೆ ನಡೆಸುವುದಾಗಿ ಹೇಳಿತ್ತು. ವಿಚಾರಣೆ ವೇಳೆ ಘಟನೆಯ ಕುರಿತು ಕಾಲಮಿತಿಯಲ್ಲಿ ತನಿಖೆಗೆ ಪೂರ್ಣಗೊಳಿಸುವುದರ ಜೊತೆಗೆ, ದೇಶವ್ಯಾಪಿ ವೈದ್ಯರ ರಕ್ಷಣೆಗೆ ಮಾರ್ಗಸೂಚಿಯಂಥ ಕ್ರಮಗಳ ಬಗ್ಗೆಯೂ ನ್ಯಾಯಾಲಯ ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೋಲ್ಕತಾ ವೈದ್ಯೆ ದೇಹದ ಮೇಲೆ 14 ಗಾಯದ ಗುರುತು
ಕೋಲ್ಕತಾ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಕೋಲ್ಕತಾದ 31 ವರ್ಷದ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ. ತಲೆ, ಮುಖ, ಕುತ್ತಿಗೆ, ತೋಳು ಹಾಗೂ ಜನನಾಂಗ ಸೇರಿದಂತೆ ದೇಹದ ವಿವಿಧೆಡೆ 14 ಗಾಯಗಳಾಗಿವೆ. ಬಲವಂತವಾಗಿ ಸಂಭೋಗ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.
ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿದ್ದರಿಂದಾಗಿ ಸಾವು ಸಂಭವಿಸಿದೆ. ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಸ್ಪಷ್ಟ ಚಿಹ್ನೆಗಳು ಇವೆ. ಆಕೆಯ ಜನನಾಂಗದಲ್ಲಿ ಬಿಳಿಯ, ಮಂದವಾದ, ಅಂಟು ದ್ರಾವಣ ಪತ್ತೆಯಾಗಿದೆ ಎನ್ನುವ ಮೂಲಕ ಅತ್ಯಾಚಾರ ನಡೆಸಿರುವುದನ್ನು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ.
ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರಾದ್ಯಂತ ಹೋರಾಟ ತೀವ್ರವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕೋಲ್ಕತಾ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ, ಸಿಬಿಐ ಪ್ರಕರಣದ ತನಿಖೆ ಮಾಡುತ್ತಿದ್ದರೂ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ಕೇಸ್ ದಾಖಲಿಸಿರುವುದು ಅಪರೂಪದ ಬೆಳವಣಿಗೆಯಾಗಿದೆ. ಈ ಪ್ರಕರಣ ಮಂಗಳವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
ಮಾಜಿ ಪ್ರಿನ್ಸಿಪಾಲ್‌ಗೆ ಸುಳ್ಳು ಪತ್ತೆ ಪರೀಕ್ಷೆ
ಕೋಲ್ಕತಾ: ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಘೋಷ್‌ಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಸಿಬಿಐ ಸತತ ನಾಲ್ಕನೇ ಬಾರಿ ಸಂದೀಪ್‌ಗೆ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಮಂಪರು ಪರೀಕ್ಷೆ ನಡೆಸಲು ಅನುಮತಿ ದೊರೆತಿದೆ.
ಅಣ್ಣನನ್ನು ಗಲ್ಲಿಗೆ ಹಾಕಿ’ಕೋಲ್ಕತಾ: ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಆರೋಪಿಯಾಗಿರುವ ಸಂಜಯ್ ರಾಯ್ ಸೋದರಿ ಮಾತನಾಡಿದ್ದು, ತಮ್ಮ ಅಣ್ಣನನ್ನು ಗಲ್ಲಿಗೆ ಹಾಕುವಂತೆ ಆಗ್ರಹಿಸಿದ್ದಾರೆ. ಆತ ಮಾಡಿರುವುದು ಘನಘೋರ ತಪ್ಪು. ಕ್ಷಮಿಸುವ ಮಾತೇ ಇಲ್ಲ ಎಂದು ರಕ್ಷಾ ಬಂಧನದಂದು ಹೇಳಿದ್ದಾರೆ.‘ಅಣ್ಣನನ್ನು ಗಲ್ಲಿಗೆ ಹಾಕಿ’ಕೋಲ್ಕತಾ: ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಆರೋಪಿಯಾಗಿರುವ ಸಂಜಯ್ ರಾಯ್ ಸೋದರಿ ಮಾತನಾಡಿದ್ದು, ತಮ್ಮ ಅಣ್ಣನನ್ನು ಗಲ್ಲಿಗೆ ಹಾಕುವಂತೆ ಆಗ್ರಹಿಸಿದ್ದಾರೆ. ಆತ ಮಾಡಿರುವುದು ಘನಘೋರ ತಪ್ಪು. ಕ್ಷಮಿಸುವ ಮಾತೇ ಇಲ್ಲ ಎಂದು ರಕ್ಷಾ ಬಂಧನದಂದು ಹೇಳಿದ್ದಾರೆ.