ಲೋಕಸಭೆಗೆ ಕಾಂಗ್ರೆಸ್‌ನ ಕೆ. ಸುರೇಶ್ ಹಂಗಾಮಿ ಸಭಾಧ್ಯಕ್ಷ

| Published : Jun 18 2024, 12:48 AM IST / Updated: Jun 18 2024, 06:14 AM IST

ಸಾರಾಂಶ

ಹಿರಿಯ ಕಾಂಗ್ರೆಸ್‌ ಸಂಸದ ಕೆ. ಸುರೇಶ್ ಅವರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಎಂದು ನೇಮಿಸಲು ನಿರ್ಧರಿಸಲಾಗಿದೆ

ನವದೆಹಲಿ: ಹಿರಿಯ ಕಾಂಗ್ರೆಸ್‌ ಸಂಸದ ಕೆ. ಸುರೇಶ್ ಅವರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಎಂದು ನೇಮಿಸಲು ನಿರ್ಧರಿಸಲಾಗಿದೆ. ಜೂ.24ರಿಂದ ಆರಂಭವಾಗಲಿರವ ಅಧಿವೇಶನದಲ್ಲಿ ನೂತನ ಸಂಸದರಿಗೆ ಅವರು ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಂಸತ್ ಸದಸ್ಯನಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಕೇರಳದ ಸುರೇಶ್ (68) ಅವರಿಗೆ ಜೂ.24ರಂದು ಸಂಸತ್ ಸಭೆ ಸೇರುವ ಮುನ್ನ ರಾಷ್ಟ್ರಪತಿ ದ್ರೌಪತಿ ಮುರ್ಮು ಪ್ರಮಾಣವಚನ ಬೋಧಿಸಲಿದ್ದಾರೆ. ಕಾಯಂ ಸಭಾಧ್ಯಕ್ಷರು ಆಯ್ಕೆ ಆಗುವವರೆಗೆ ಸುರೇಶ್‌ ಕೆಲಸ ಮಾಡಲಿದ್ದಾರೆ.