ವೀಸಾ ಹಿಂದಿಕ್ಕಿದ ಯುಪಿಐ ಈಗ ವಿಶ್ವದಲ್ಲೇ ನಂಬರ್‌ 1

| N/A | Published : Jul 15 2025, 01:00 AM IST / Updated: Jul 15 2025, 05:31 AM IST

ಸಾರಾಂಶ

: ಭಾರತದಲ್ಲಿ ಮೊಬೈಲ್‌ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಈಗ ವಿಶ್ವದ ಅತಿದೊಡ್ಡ ನೈಜ-ಸಮಯದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈವರೆಗೆ ನಂ.1 ನೈಜ ಸಮಯದ ಪಾವತಿ ವ್ಯವಸ್ಥೆಯಾಗಿದ್ದ ವೀಸಾ ಅನ್ನು ಅದು ಹಿಂದಿಕ್ಕಿದೆ.

ನವದೆಹಲಿ: ಭಾರತದಲ್ಲಿ ಮೊಬೈಲ್‌ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಈಗ ವಿಶ್ವದ ಅತಿದೊಡ್ಡ ನೈಜ-ಸಮಯದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈವರೆಗೆ ನಂ.1 ನೈಜ ಸಮಯದ ಪಾವತಿ ವ್ಯವಸ್ಥೆಯಾಗಿದ್ದ ವೀಸಾ ಅನ್ನು ಅದು ಹಿಂದಿಕ್ಕಿದೆ.

ಮೇ-ಜೂನ್ 2025ರಲ್ಲಿ ಪ್ರತಿದಿನ 65 ಕೋಟಿ ವಹಿವಾಟುಗಳನ್ನು ಮಾಡುವ ಮೂಲಕ, ಯುಪಿಐ, ವೀಸಾವನ್ನು ಮೀರಿಸಿದೆ. ಈ ಅವಧಿಯಲ್ಲಿ 63.9 ಕೋಟಿ ವಹಿವಾಟು ನಡೆಸಿದೆ. ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದರೆ, ಯುಪಿಐ ಭಾರತ ಸೇರಿ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ವೀಸಾವನ್ನು ಯುಪಿಐ ಮೀರಿಸಿದ್ದು ಇಲ್ಲಿ ಗಮನಾರ್ಹ.

ಕಳೆದ ತಿಂಗಳೇ ಈ ಸಾಧನೆ ಮಾಡಲಾಗಿದ್ದು, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್‌ ಕಾಂತ್‌ ಇದನ್ನು ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಯುಪಿಐ ಮೂಲಕ ಭಾರತದಲ್ಲಿ ಗೂಗಲ್ ಪೇ, ಫೋನ್‌ ಪೇ, ಭೀಮ್‌ ಯುಪಿಐ, ಅಮೇಜಾನ್‌ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್‌ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ. ಬ್ಯಾಂಕ್‌ ಖಾತೆಯನ್ನು ಜನರು ಈ ಆ್ಯಪ್‌ಗಳಲ್ಲಿ ಲಿಂಕ್‌ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಆಗುತ್ತದೆ. ಮೊಬೈಲ್‌ ಮೂಲಕ ಹಣ ಕಸಿಸುವ ವ್ಯವಸ್ಥೆ ಆಗಿರುವ ಕಾರಣ ಹಳ್ಳಿ ಹಳ್ಳಿಗಳಲ್ಲೂ ಇದು ಜನಪ್ರಿಯವಾಗಿದೆ.

Read more Articles on