ಬಿಹಾರ ಮಾಜಿ ಡಿಸಿಎಂ ಸುಶೀಲ್‌ ಮೋದಿ ನಿಧನ

| Published : May 14 2024, 01:02 AM IST / Updated: May 14 2024, 05:00 AM IST

Sushil Kumar Modi  property

ಸಾರಾಂಶ

ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಕುಮಾರ್ ಮೋದಿ (72) ಸೋಮವಾರ ರಾತ್ರಿ ನಿಧನರಾದರು.

ನವದೆಹಲಿ/ಪಟನಾ: ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಕುಮಾರ್ ಮೋದಿ (72) ಸೋಮವಾರ ರಾತ್ರಿ ನಿಧನರಾದರು.ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಮ್ಸ್‌ನಲ್ಲೇ ಅವರು ಕೊನೆಯುಸಿರು ಎಳೆದಿದ್ದಾರೆ.

ನಿತೀಶ್‌ ಕುಮಾರ್‌ ಅವರು ಈ ಹಿಂದೆ ಬಿಹಾರ ಮುಖ್ಯಮಂತ್ರಿ ಆಗಿದ್ದ ವೇಳೆ ಮೋದಿ ಉಪಮುಖ್ಯಮಂತ್ರಿಯಾಗಿದ್ದರು. ಸರಳ-ಸಜ್ಜನಿಕೆಗಾಗಿ ಹೆಸರುವಾಸಿ ಆಗಿದ್ದರು. 

ಆರ್ಥಿಕ ತಜ್ಞರಾಗಿದ್ದ ಮೋದಿ, ರಾಜ್ಯಸಭೆ ಸದಸ್ಯ ಆದ ಬಳಿಕ ಜಿಎಸ್ಟಿ ಮಂಡಳಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಆದರೆ ಕ್ಯಾನ್ಸರ್‌ ಪೀಡಿತರಾದ ಕಾರಣ ಇತ್ತೀಚೆಗೆ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಮರುಸ್ಥಾಪನೆ ಆದಾಗ ಅವರು ಡಿಸಿಎಂ ಹುದ್ದೆ ಸ್ವೀಕರಿಸಿರಲಿಲ್ಲ.ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.