ಸಾರಾಂಶ
ಸಿರಿಯಾದ ಪದಚ್ಯುತ ಸರ್ವಾಧಿಕಾರಿ ಬಷರ್ ಅಲ್ ಅಸಾದ್ ಬಳಸುತ್ತಿದ್ದ ಟ್ಯಾಂಕರ್‌ಗಳು ಈಗ ತರಕಾರಿ ಮಾರುವ ಗಾಡಿಗಳಾಗಿ ಮಾರ್ಪಾಟಾಗಿರುವ ಫೋಟೋ ವೈರಲ್ ಆಗಿವೆ. ಆದರೆ ಇವುಗಳ ನೈಜತೆ ತಿಳಿದುಬಂದಿಲ್ಲ
ಡಮಾಸ್ಕಸ್: ಸಿರಿಯಾದ ಪದಚ್ಯುತ ಸರ್ವಾಧಿಕಾರಿ ಬಷರ್ ಅಲ್ ಅಸಾದ್ ಬಳಸುತ್ತಿದ್ದ ಟ್ಯಾಂಕರ್‌ಗಳು ಈಗ ತರಕಾರಿ ಮಾರುವ ಗಾಡಿಗಳಾಗಿ ಮಾರ್ಪಾಟಾಗಿರುವ ಫೋಟೋ ವೈರಲ್ ಆಗಿವೆ. ಆದರೆ ಇವುಗಳ ನೈಜತೆ ತಿಳಿದುಬಂದಿಲ್ಲ
ಬಷರ್ ತನ್ನ ಅವಧಿಯಲ್ಲಿ ನರಮೇಧಕ್ಕೆ ಬಳಸುತ್ತಿದ್ದ ಸೋವಿಯತ್ ನಿರ್ಮಿತ ಟಿ-55 ಟ್ಯಾಂಕರ್ ಸ್ಥಿತಿ ಈಗ ಹೀಗಾಗಿದೆ. ರಾಜಧಾನಿ ಡಮಾಸ್ಕಸ್‌ನಲ್ಲಿನ ಜನರು ಇವುಗಳನ್ನು ತರಕಾರಿ ಇರಿಸಿಕೊಳ್ಳುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಇವುಗಳನ್ನು ಬಷರ್ ತನ್ನ ಅವಧಿಯಲ್ಲಿ ಸೇನೆಯಲ್ಲಿ ಬಳಸುತ್ತಿದ್ದ. ತನ್ನ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕಲು ಸಹ ಇವುಗಳನ್ನು ಬಳಸುತ್ತಿದ್ದ ಎಂದು ವೈರಲ್ ಸಂದೇಶಗಳಲ್ಲಿ ಬರೆಯಲಾಗುದೆ.ಕಳ್ಳಸಾಗಣೆ: ಏರ್‌ಇಂಡಿಯಾ ಸಿಬ್ಬಂದಿ ಬಳಿ ಇದ್ದ 1.7 ಕೇಜಿ ಚಿನ್ನ ಜಪ್ತಿಚೆನ್ನೈ: ಪ್ರಯಾಣಿಕನಿಗೆ ಸಹಾಯ ಮಾಡಲು ಏರ್ ಇಂಡಿಯಾ ಸಿಬ್ಬಂದಿ 1.7 ಕೇಜಿ ಚಿನ್ನ ಕಳ್ಳಸಾಗಣೆಯಲ್ಲಿ ಸಿಲುಕಿಕೊಂಡಿದ್ದು, ಸಿಬ್ಬಂದಿ ಮತ್ತು ಪ್ರಯಾಣಿಕನನ್ನು ಅಧಿಕಾರಿಗಳು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.ಕ್ಯಾಬಿನ್ ಸಿಬ್ಬಂದಿಯು ಪ್ರಯಾಣಿಕನಿಗೆ ಸಹಾಯ ಮಾಡಲು 1.7 ಕೇಜಿ 24 ಕ್ಯಾರೆಟ್‌ನ ಚಿನ್ನವನ್ನು ಒಳ ಉಡುಪಿನಲ್ಲಿ ಸಾಗಿಸಿದ್ದಾರೆ. ಆದರೆ ಚೆನ್ನೈ ಏರ್ಪೋರ್ಟ್‌ನಲ್ಲಿ ಅಧಿಕಾರಿಗಳು ಪರಿಶೀಲಿಸಿದಾಗ ಸಿಕ್ಕಿಬಿದ್ದಿದ್ದಾರೆ. ಜೊತೆಗೆ ಪ್ರಯಾಣಿಕ ಅಕ್ರಮ ಒಪ್ಪಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಮತ್ತೊಂದೆಡೆ ಡಿ.7ರಂದು ಇಥಿಯೋಪಿಯನ್ ಏರ್‌ಲೈನ್ಸ್ ಮೂಲಕ ಬಂದ ಕೀನ್ಯಾ ಮಹಿಳೆಯಿಂದ ಅಧಿಕಾರಿಗಳು 14.2 ಕೋಟಿ ರು. ಮೌಲ್ಯದ ಮಾದಕ ವಸ್ತುಗಳ ಕ್ಯಾಪ್ಸ್ಯುಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.