ಸಾರಾಂಶ
2025ರ ಕೇಂದ್ರ ಬಜೆಟ್‌ನ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಾರ್ಷಿಕ 10-15 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿಯ ಸಿಹಿಸುದ್ದಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: 2025ರ ಕೇಂದ್ರ ಬಜೆಟ್‌ನ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಾರ್ಷಿಕ 10-15 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವವರಿಗೆ ತೆರಿಗೆ ವಿನಾಯಿತಿಯ ಸಿಹಿಸುದ್ದಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಮೂಲಸೌಕರ್ಯಗಳಿಗೆ ಬಜೆಟ್ ಹೆಚ್ಚಿನ ಗಮನ ಹರಿಸಲಿದೆ ಎನ್ನಲಾಗಿದೆ. ಮಧ್ಯಮ ವರ್ಗದವರಿಗೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದ್ದು, ಇದರಿಂದ ಜನರ ಖರ್ಚಿನ ವೆಚ್ಚ ಹೆಚ್ಚಾಗಿ ಆ ಮೂಲಕ ಆರ್ಥಿಕ ಯಂತ್ರಕ್ಕೆ ಭಾರಿ ಲಾಭವಾಗುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಲ್ಲದೆ, ಭಾರತೀಯ ಕಂಪನಿಗಳು ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಲು ಎಐನ ಬಳಕೆಯ ಕುರಿತಾಗಿಯೂ ಬಜೆಟ್ ಗಮನ ಹರಿಸಲಿದೆ. ಎಐನಿಂದ ಉದ್ಯೋಗಾವಕಾಶ ಕ್ಷೀಣಿಸುತ್ತದೆ ಎಂಬ ಕಳವಳದ ನಡುವೆ ಈ ಸಂಗತಿ ಪ್ರಾಮುಖ್ಯತೆ ಪಡೆದಿದೆ.