ಸಾರಾಂಶ
ಛತ್ತೀಸ್‌ಗಢದ ಸಿಎಎಫ್ ಕಮಾಂಡರ್ ಒಬ್ಬರನ್ನು ಮಾವೋವಾದಿಗಳು ಕೊಡಲಿಯಿಂದ ಕೊಚ್ಚಿಕೊಂದ ಘಟನೆ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ರಾಯ್ಪುರ: ತರಕಾರಿ ತರಲು ಹೋಗಿದ್ದ ವೇಳೆ ಛತ್ತೀಸ್‌ಗಢ ಅರೆಸೇನಾ ಪಡೆಯ ಕಮಾಂಡರ್ ಒಬ್ಬರನ್ನು ನಕ್ಸಲರು ಕೊಡಲಿಯಿಂದ ಕೊಂದು ಪರಾರಿಯಾದ ಘಟನೆ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯೋಧನನ್ನು ಕಂಕೇರ್ ಜಿಲ್ಲೆಯ ಭಾನುಪ್ರತಾಪ್‌ಪುರದ ತೇಜ್ ರಾಮ್ ಭುವಾರ್ಯ ಎಂದು ಗುರುತಿಸಲಾಗಿದ್ದು, ತನ್ನ ಕ್ಯಾಂಪ್‌ನಿಂದ ತರಕಾರಿ ತರಲು ಹೋಗುತ್ತಿದ್ದ ವೇಳೆ ಮಾವೋವಾದಿಗಳು ಈತನನ್ನು ದಾಳಿ ಮಾಡಿ ಕೊಡಲಿಯಿಂದ ಹೊಡೆದು ಸಾಯಿಸಿ ಪರಾರಿಯಾಗಿದ್ದಾರೆ.ಈ ಘಟನೆಯನ್ನು ಮೃತನ ಸಹಾಯಕರು ತಮ್ಮ ಸಿಬ್ಬಂದಿಗೆ ತಿಳಿಸಿ ಕರೆತರುವ ವೇಳೆಗೆ ಯೋಧನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಕೊಲೆಗಡುಕರ ಪತ್ತೆಗೆ ಬಲೆ ಬೀಸಿದ್ದಾರೆ.