ಸಾರಾಂಶ
500 ರು.ಗೆ ಸಿಲಿಂಡರ್, 200 ಯುನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿಗಳನ್ನು ತೆಲಂಗಾಣದಲ್ಲಿ ಫೆ.27ರಿಂದ ಜಾರಿಗೊಳಿಸಲು ಸಕಲ ಸಿದ್ಧತೆಯಲ್ಲಿ ಸರ್ಕಾರ ತೊಡಗಿದೆ.
ಹೈದರಾಬಾದ್: ತೆಲಂಗಾಣದಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದ್ದ ಹಲವು ಗ್ಯಾರಂಟಿಗಳ ಪೈಕಿ ಎರಡನ್ನು ಫೆ.27ರ ಶುಕ್ರವಾರ ಜಾರಿಗೊಳಿಸಲಿದೆ.
500 ರು.ಗೆ ಅಡುಗೆ ಅನಿಲ ಹಾಗೂ 200 ಯುನಿಟ್ ಉಚಿತ ವಿದ್ಯುತ್ ಯೋಜನೆಗಳನ್ನು ಅಂದು ಸಂಜೆ ಜಾರಿ ಮಾಡಲಾಗುತ್ತದೆ. ಇದರ ಉದ್ಘಾಟನೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬರಲಿದ್ದಾರೆ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ.
ಈಗಾಗಲೇ ತೆಲಂಗಾಣದಲ್ಲಿ ಕರ್ನಾಟಕದ ರೀತಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡಲಾಗಿದೆ.