ಸಾರಾಂಶ
ಬಿಜೆಪಿಗೆ ಮತ ಹಾಕಿ. ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂಬುದಾಗಿ ತೆಲಂಗಾಣದ ಬಿಜೆಪಿ ಸಂಸದ ಡಿ ಅರವಿಂದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೈದರಾಬಾದ್: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಬಿಜೆಪಿ ಸಂಸದ ಡಿ. ಅರವಿಂದ್ ಮತದಾರರಿಗೆ ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ್ದಾರೆ.
ಬುಧವಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ, ಉಚಿತ ಅನ್ನ, ಅಡುಗೆ ಅನಿಲ, ಉತ್ತಮ ಶಿಕ್ಷಣ ವ್ಯವಸ್ಥೆ, ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ.ನೀವು ಅನ್ನ ತಿನ್ನಿಸಿದ ಕೈಗಳನ್ನು ಕಚ್ಚಬೇಡಿ. ಒಂದು ವೇಳೆ ನೀವು ಬಿಜೆಪಿಗೆ ಮತಹಾಕದಿದ್ದರೆ, ಖಂಡಿತವಾಗಿಯೂ ನರಕಕ್ಕೆ ಹೋಗುತ್ತೀರಿ. ನೀವು ಬಿಆರ್‌ಎಸ್ ಹಾಗೂ ಕಾಂಗ್ರೆಸ್‌ಗೆ ಮತ ಹಾಕಿದರೆ, ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದರು.