ದಿನಕ್ಕೆ 10 ತಾಸು ಕೆಲಸ ಅವಧಿಗೆ ತೆಲಂಗಾಣ ಸರ್ಕಾರದ ಸಮ್ಮತಿ

| N/A | Published : Jul 07 2025, 12:34 AM IST / Updated: Jul 07 2025, 04:21 AM IST

ಸಾರಾಂಶ

ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. ಆದರೆ ಉದ್ಯೋಗಿಗಳ ಕೆಸಲದ ಅವಧಿ ವಾರಕ್ಕೆ 48 ಗಂಟೆ ಮೀರಬಾರದು ಎಂದು ಸೂಚಿಸಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ನೀತಿ ಜಾರಿ ನಿಟ್ಟಿನಲ್ಲಿ ಈ ಅನುಮತಿ ನೀಡಲಾಗಿದೆ.

 ಹೈದರಾಬಾದ್‌: ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. ಆದರೆ ಉದ್ಯೋಗಿಗಳ ಕೆಸಲದ ಅವಧಿ ವಾರಕ್ಕೆ 48 ಗಂಟೆ ಮೀರಬಾರದು ಎಂದು ಸೂಚಿಸಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ನೀತಿ ಜಾರಿ ನಿಟ್ಟಿನಲ್ಲಿ ಈ ಅನುಮತಿ ನೀಡಲಾಗಿದೆ.

ಅಂಗಡಿಗಳನ್ನು ಹೊರತು ಪಡಿಸಿ ಉಳಿದ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಮಿಕರ ಸುರಕ್ಷತೆಯ ಎಲ್ಲಾ ನಿಯಮಗಳಿಗೆ ಒಳಪಟ್ಟು ಉದ್ಯೋಗಿಗಳು ನಿತ್ಯ 10 ಗಂಟೆ ಕೆಲಸ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ವಾರಕ್ಕೆ 48 ಗಂಟೆಗಳ ಮಿತಿ ಹೇರಿರುವ ಸರ್ಕಾರ ಅಧಿಕ ಅವಧಿ ಕೆಲಸ ಮಾಡಿಸಿಕೊಂಡರೆ ಹೆಚ್ಚಿನ ವೇತನವನ್ನು ನೀಡಬೇಕು ಎಂದಿದೆ. 

ಇನ್ನು ಈ ಕಾನೂನಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಪ್ರಕಟಿಸಿರುವ ಸರ್ಕಾರ, ಒಬ್ಬ ಉದ್ಯೋಗಿ ಒಂದು ದಿನದಲ್ಲಿ 6 ಗಂಟೆ ಕೆಲಸ ಮಾಡಿದರೆ 30 ನಿಮಿಷ ವಿಶ್ರಾಂತಿಯನ್ನು ಪಡೆಯಬೇಕು. ಅಧಿಕ ಅವಧಿಯನ್ನು ಸೇರಿಸಿ ದಿನದ ಕೆಲಸದ ಸಮಯ 12 ಗಂಟೆ ಮೀರಬಾರದು ಎಂದಿದೆ. ಜೊತೆಗೆ 3 ತಿಂಗಳ ಅವಧಿಗೆ ಉದ್ಯೋಗಿಗಳ ಒಟ್ಟು ಕೆಲಸದ ಸಮಯ 144 ಗಂಟೆಗೆ ಮಿತಿಗೊಳಿಸಿದೆ.

Read more Articles on