ಡೆಹ್ರಾಡೂನ್‌ : ಭೀಕರ ಕಾರು ಅಪಘಾತ , ರುಂಡ ತುಂಡು, ದೇಹ ನಜ್ಜುಗುಜ್ಜು- 6 ಮಂದಿ ದುರಂತ ಅಂತ್ಯ

| Published : Nov 16 2024, 12:38 AM IST / Updated: Nov 16 2024, 04:36 AM IST

ಸಾರಾಂಶ

ಇಲ್ಲಿ ಕಳೆದ ಸೋಮವಾರ ತಡರಾತ್ರಿ ಕಾರು ಭೀಕರ ಅಪಘಾತಕ್ಕೀಡಾಗಿದ್ದು 6 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಟ್ರಕ್‌ಗೆ ಹಿಂಬದಿಯಿಂದ ಕಾರು ಅಪ್ಪಳಿಸಿದ್ದು, ದೇಹಗಳು ನಜ್ಜುಗುಜ್ಜಾಗಿವೆ. ರುಂಡಗಳು ಬೇರ್ಪಟ್ಟಿವೆ.

ಡೆಹ್ರಾಡೂನ್‌: ಇಲ್ಲಿ ಕಳೆದ ಸೋಮವಾರ ತಡರಾತ್ರಿ ಕಾರು ಭೀಕರ ಅಪಘಾತಕ್ಕೀಡಾಗಿದ್ದು 6 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಟ್ರಕ್‌ಗೆ ಹಿಂಬದಿಯಿಂದ ಕಾರು ಅಪ್ಪಳಿಸಿದ್ದು, ದೇಹಗಳು ನಜ್ಜುಗುಜ್ಜಾಗಿವೆ. ರುಂಡಗಳು ಬೇರ್ಪಟ್ಟಿವೆ.

ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಕಾರು ಡಿಕ್ಕಿ ರಭಸಕ್ಕೆ ಟೊಯೊಟಾ ಇನ್ನೋವಾ ಛಾವಣಿ ಕಿತ್ತು ಹೋಗಿದೆ.ಇಬ್ಬರ ರುಂಡ ದೇಹದಿಂದ ಬೇರ್ಪಟ್ಟಿದೆ. ಒಬ್ಬನ ತಲೆ ಸಂಪೂರ್ಣ ಹೋಳಾಗಿದೆ. ಇನ್ನೊಬ್ಬರ ದೇಹ ನಜ್ಜುಗುಜ್ಜಾದ ಕಾರಿನ ಒಳಗೆ ಸಿಕ್ಕಿ ಹಾಕಿಕೊಂಡಿದೆ. ಸಂತ್ರಸ್ತರ ದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಬಿಎಂಡಬ್ಲು ಕಾರ್‌ ಜತೆ ರೇಸ್‌

ಕಾರಲ್ಲಿದ್ದ 7 ಸ್ನೇಹಿತರು ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದರು. ಬಿಎಂಡಬ್ಲು ಕಾರಿನ ಜತೆ 100 ಕಿ.ಮೀ. ವೇಗದಲ್ಲಿ ರೇಸ್‌ಗೆ ಇಳಿದಿದ್ದರು. ಇದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.