2025ನೇ ಮಿಸ್‌ ವರ್ಲ್ಡ್‌ ಆಗಿ ಥಾಯ್ಲೆಂಡ್‌ ಓಪಲ್‌ ಸುಚಾಟಾ ಚುವಾಂಗ್ರ್ಸಿ ಆಯ್ಕೆಯಾಗಿದ್ದಾರೆ. ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಅಡ್ಮಾಸು ರನ್ನರ್‌ ಅಪ್‌ ಆಗಿದ್ದಾರೆ.

ಹೈದರಾಬಾದ್‌: 2025ನೇ ಮಿಸ್‌ ವರ್ಲ್ಡ್‌ ಆಗಿ ಥಾಯ್ಲೆಂಡ್‌ ಓಪಲ್‌ ಸುಚಾಟಾ ಚುವಾಂಗ್ರ್ಸಿ ಆಯ್ಕೆಯಾಗಿದ್ದಾರೆ. ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಅಡ್ಮಾಸು ರನ್ನರ್‌ ಅಪ್‌ ಆಗಿದ್ದಾರೆ. ನೂತನ ಮಿಸ್‌ ವರ್ಲ್ಡ್‌ಗೆ ಕಳೆದ ಬಾರಿಯ ಪ್ರಶಸ್ತಿ ಪುರಸ್ಕೃತೆ ಕ್ರಿಸ್ಟಿನಾ ಪಿಸ್ಜ್ಕೋವಾ ಕಿರೀಟ ತೊಡಿಸಿದರು. ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಂದಿನಿ ಗುಪ್ತಾ ಅಂತಿಮ 8ರ ಸುತ್ತು ಪ್ರವೇಶಿಸಲು ಕೂಡಾ ವಿಫಲರಾಗಿ ನಿರಾಸೆ ಮೂಡಿಸಿದರು.

ಇಲ್ಲಿನ ಹೈಟೆಕ್ಸ್ ಪ್ರದರ್ಶನ ಕೇಂದ್ರದಲ್ಲಿ 72ನೇ ಮಿಸ್‌ ವರ್ಲ್ಡ್‌ ಕಾರ್ಯಕ್ರಮ ಶನಿವಾರ ಆಯೋಜನೆಗೊಂಡಿದ್ದು ಭಾರೀ ಜನಮನ ಸೂರೆಗೊಂಡಿತು.

ಮೇ 11ರಂದು ಆರಂಭವಾದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಒಟ್ಟು 108 ಮಂದಿ ಸ್ಪರ್ಧಿಸಿದ್ದು, ವಿವಿಧ ಹಂತಗಳ ಬಳಿಕ 24 ಜನ ಅಂತಿಮ ಹಂತಕ್ಕೆ ತಲುಪಿದ್ದರು.

1951ರಲ್ಲಿ ಮಿಸ್‌ ವರ್ಲ್ಡ್‌ ಸ್ಪರ್ಧೆ ಆರಂಭಿಸಲಾಗಿತ್ತು. ಈವರೆಗೆ ಈ ಸ್ಪರ್ಧೆ ಒಟ್ಟು 3 ಬಾರಿ ಭಾರತದಲ್ಲಿ ಆಯೋಜನೆಗೊಂಡಿದೆ. 1996ನಲ್ಲಿ ಬೆಂಗಳೂರಿನಲ್ಲಿ, 2024ರಲ್ಲಿ ಮುಂಬೈನಲ್ಲಿ ನಡೆದಿತ್ತು.