ಸಾರಾಂಶ
ವಿಶ್ವದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ ಮಿಸ್ ವರ್ಲ್ಡ್ ಶನಿವಾರದಿಂದ ಹೈದರಾಬಾದ್‌ನಲ್ಲಿ ಶುರುವಾಗಲಿದೆ. ನಗರದ ಗಚ್ಚಿಬೌಲಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಈ ಬಾರಿ ಭಾರತವನ್ನು ರಾಜಸ್ಥಾನದ ನಂದಿನಿ ಗುಪ್ತಾ ಅವರು ಪ್ರತಿನಿಧಿಸಲಿದ್ದಾರೆ.
ಹೈದರಾಬಾದ್: ವಿಶ್ವದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾದ ಮಿಸ್ ವರ್ಲ್ಡ್ ಶನಿವಾರದಿಂದ ಹೈದರಾಬಾದ್‌ನಲ್ಲಿ ಶುರುವಾಗಲಿದೆ. ನಗರದ ಗಚ್ಚಿಬೌಲಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಈ ಬಾರಿ ಭಾರತವನ್ನು ರಾಜಸ್ಥಾನದ ನಂದಿನಿ ಗುಪ್ತಾ ಅವರು ಪ್ರತಿನಿಧಿಸಲಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಈಗಾಗಲೇ 115 ದೇಶಗಳ ಪ್ರತಿನಿಧಿಗಳು ಹೈದರಾಬಾದ್‌ಗೆ ಆಗಮಿಸಿದ್ದು, ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಕೆಲವರ ಆಗಮನ ಬಾಕಿ ಇದೆ. ಅಂತಿಮ ಸುತ್ತು ಮೇ 31ರಂದು ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
1951ರಲ್ಲಿ ಆರಂಭವಾದ ಮಿಸ್ ವರ್ಲ್ಡ್ ಸ್ಪರ್ಧೆ ಇದುವರೆಗೆ ಭಾರತದಲ್ಲಿ 3 ಬಾರಿ ಆಯೋಜನೆಗೊಂಡಿದೆ. ಮೊದಲು 1996ರಲ್ಲಿ ಬೆಂಗಳೂರಿನಲ್ಲಿ, 2024ರಲ್ಲಿ ಮುಂಬೈನಲ್ಲಿ ಮತ್ತು ಈಗ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಭಾರತದಿಂದ ಒಟ್ಟು 6 ಸುಂದರಿಯರು ಕಿರೀಟ ಗಳಿಸಿದ್ದಾರೆ.