ಸಾರಾಂಶ
ಗಡಿಯಲ್ಲಿರುವ ಹಿಂದೂ ಶಿವ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಸಮರಕ್ಕೆ 2ನೇ ದಿನವಾದ ಶುಕ್ರವಾರ ಬ್ರೇಕ್ ಬಿದ್ದಿದ್ದು, ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ.
ಸುರಿನ್: ಗಡಿಯಲ್ಲಿರುವ ಹಿಂದೂ ಶಿವ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಸಮರಕ್ಕೆ 2ನೇ ದಿನವಾದ ಶುಕ್ರವಾರ ಬ್ರೇಕ್ ಬಿದ್ದಿದ್ದು, ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ.
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ಹಾಗೂ ಥಾಯ್ಲೆಂಡ್ ಪ್ರಧಾನಿ ವೆಚಾಯಾಯೈ ಜತೆ ಫೋನ್ ಮಾತುಕತೆ ನಡೆಸಿದರು. ಬಳಿಕ ಉಭಯ ದೇಶಗಳು ಕದನಕ್ಕೆ ಸಮ್ಮತಿಸಿದರು.
ಈ ವಿಷಯವನ್ನು ಖುದ್ದು ಇಬ್ರಾಹಿಂ ಬಹಿರಂಗಪಡಿಸಿದ್ದಾರೆ. ಆದರೆ ನಮಗೆ ಸಮರ ನಿಲ್ಲಿಸಲು ಸಮ್ಮತಿ ಇದೆ. ಕಾಂಬೋಡಿಯಾ ಕೂಡ ಕದನವಿರಾಮಕ್ಕೆ ಬದ್ಧತೆ ವ್ಯಕ್ತಪಡಿಸಬೇಕು ಎಂದು ಥಾಯ್ಲೆಂಡ್ ಸ್ಪಷ್ಟಪಡಿಸಿದೆ.
ಸೇನಾ ಕಾನೂನು: ಇದಕ್ಕೂ ಮುನ್ನ ಥಾಯ್ಲೆಂಡ್‌ನ ಈಶಾನ್ಯ ಗಡಿಯ 8 ಜಿಲ್ಲೆಗಳಲ್ಲಿ ಸಮರ ಕಾನೂನು ಘೋಷಿಸಲಾಗಿತ್ತು. ಇದರರ್ಥ, ಥಾಯ್ ಸರ್ಕಾರವು ಸೇನೆಗೆ ಕಾಂಬೋಡಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರ ನೀಡಿತ್ತು.16 ಸಾವು: ಇದರ ನಡುವೆ, ಗಡಿಭಾಗದ ಎರಡೂ ದೇಶಗಳ 1.38 ಲಕ್ಷ ಜನ ಗುಳೆ ಹೋಗಿದ್ದಾರೆ. ಸಮರದಲ್ಲಿ ಎರಡೂ ದೇಶಗಳ ಒಟ್ಟಾರೆ ಮೃತರ ಸಂಖ್ಯೆ 16ಕ್ಕೇರಿದೆ. ಇದರಲ್ಲಿ ಕಾಂಬೋಡಿಯಾದ ನಾಲ್ವರು ಥಾಯ್ಲೆಂಡ್‌ನ 14 ಜನರು ಇದ್ದಾರೆ.