ಸಾರಾಂಶ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಜಾತಿಗಣತಿಗೆ ಆಗ್ರಹಿಸಿದ ಬಳಿಕ ಆರಂಭವಾಗಿದ್ದ ಆ ಕುರಿತ ಚರ್ಚೆ ಮಂಗಳವಾರ ವೈಯಕ್ತಿಕ ತಿರುವು ಪಡೆದುಕೊಂಡಿತು.
ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಜಾತಿಗಣತಿಗೆ ಆಗ್ರಹಿಸಿದ ಬಳಿಕ ಆರಂಭವಾಗಿದ್ದ ಆ ಕುರಿತ ಚರ್ಚೆ ಮಂಗಳವಾರ ವೈಯಕ್ತಿಕ ತಿರುವು ಪಡೆದುಕೊಂಡಿತು. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮಾತನಾಡಿ, ‘ತಮ್ಮದು ಯಾವ ಜಾತಿ ಎಂದೇ ತಿಳಿದಿಲ್ಲದವರು ಜಾತಿ ಗಣತಿಗೆ ಕರೆ ನೀಡುತ್ತಿದ್ದಾರೆ’ ಎಂದು ಆಡಿದ ಮಾತು ಕೋಲಾಹಲಕ್ಕೆ ನಾಂದಿ ಹಾಡಿತು.
ಠಾಕೂರ್ ಯಾವುದೇ ಹೆಸರನ್ನು ತೆಗೆದುಕೊಳ್ಳಲಿಲ್ಲ. ಆದರೆ ಅವರು ಆಡಿದ ಮಾತು ರಾಹುಲ್ ಗಾಂಧಿ ಅವರನ್ನೇ ಉದ್ದೇಶಿಸಿ ಆಗಿತ್ತು ಹಾಗೂ ಗಾಂಧಿ ಅವರನ್ನು ಹಾಗೂ ಕಾಂಗ್ರೆಸ್ ಸಂಸದರನ್ನು ಕೆಣಕುವಂತೆ ಮಾಡಿದವು.ಇದಕ್ಕೆ ತೀಕ್ಷ್ನವಾಗಿಯೇ ತಿರುಗೇಟು ನೀಡಿದ ರಾಹುಲ್, ‘ಅನುರಾಗ್ ಅವರು ನನ್ನನ್ನು ಅವಮಾನಿಸಿದ್ದಾರೆ. ಆದರೆ ನಾನು ಕ್ಷಮೆ ಕೇಳಿ ಎಂದು ಅವರನ್ನು ಆಗ್ರಹಿಸುವುದಿಲ್ಲ. ಅಲ್ಲದೆ, ಎಷ್ಟೇ ಅವಮಾನ ಮಾಡಿದರೂ ಸರಿ ಜಾತಿ ಗಣತಿ ನಡೆದೇ ತೀರಬೇಕು ಎಂದು ಇಂಡಿಯಾ ಕೂಟ ಪಣ ತೊಡುತ್ತದೆ’ ಎಂದರು.