ವಿಜಯ್‌ಗಾಗಿ 10 ಸಾವಿರ ಸಾಲಿನ ಕವಿತೆ!

| Published : Apr 22 2024, 02:01 AM IST / Updated: Apr 22 2024, 05:28 AM IST

ಸಾರಾಂಶ

36 ತಾಸಿನಲ್ಲಿ ಬರೆದು ಅಭಿಮಾನಿ ಕಾರ್ತಿವೇಲ್‌ ಗಿನ್ನೆಸ್‌ ದಾಖಲೆ ನಿರ್ಮಿಸಿದ್ದಾರೆ.

ಚೆನ್ನೈ : ತಮಿಳು ನಟ ದಳಪತಿ ವಿಜಯ್ ಎರಡು ದಶಕದ ಹಿಂದೆ ಅಭಿನಯಿಸಿದ್ದ ಗಿಲ್ಲಿ ಸಿನಿಮಾ ಏ. 20 ರಂದು ರೀ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ನಟನ ಅಭಿಮಾನಿಯೊಬ್ಬರು ವಿಜಯ್‌ ಅವರಿಗಾಗಿ 36 ಗಂಟೆಯಲ್ಲಿ ಬರೋಬ್ಬರಿ 10 ಸಾವಿರ ಸಾಲಿನ ಕವಿತೆ ಬರೆದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

ತಮಿಳುನಾಡು ಮೂಲದ ಎಸ್ ಕಾತಿರ್ವೇಲ್ ಎನ್ನುವ ವಿಜಯ್ ಅಭಿಮಾನಿಯೊಬ್ಬರು ಇಂತಹದ್ದೊಂದು ಸಾಹಸ ಮಾಡಿದವರು.

ಏಪ್ರಿಲ್ 16 ರ ಬೆಳಿಗ್ಗೆ 11 ಗಂಟೆಯಿಂದ ಮರುದಿನ ರಾತ್ರಿ 11ರವರೆಗೆ ನಿರಂತರವಾಗಿ ಕವಿತೆ ಬರೆದಿದ್ದಾರೆ. ಬರೋಬ್ಬರಿ 10 ಸಾವಿರ ಸಾಲಿನ ಪದ್ಯದಲ್ಲಿ ನಟನ ಮೇಲೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಅವರ ಕವಿತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.