ಸಾರಾಂಶ
ಇಸ್ಲಾಮಾಬಾದ್: ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ್ದ ಬೆಲಾರಸ್ ಅಧ್ಯಕ್ಷರ ಜೊತೆ ಕಾಶ್ಮೀರ ವಿಷಯ ಪ್ರಸ್ತಾಪಿಸಲು ಹೋದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಎಲ್ಲರ ಎದುರೇ ತಿರುಗೇಟು ನೀಡಿದ ಘಟನೆ ನಡೆದಿದೆ.
ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆನ್ಕೋ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಕಾಶ್ಮೀರ ವಿಷಯ ಪ್ರಸ್ತಾಪಿಸಿ ಭಾರತವನ್ನು ಖಂಡಿಸುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಸ್ಥಳದಲ್ಲೇ ಸ್ಪಷ್ಟವಾಗಿ ತಿರುಗೇಟು ನೀಡಿದ ಅಲೆಕ್ಸಾಂಡರ್, ‘ನಾನು ಇಲ್ಲಿಗೆ ಬಂದಿರುವುದು ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಯ ಮಾತುಕತೆಗಾಗಿ ಮಾತ್ರ. ಹೀಗಾಗಿ ಕಾಶ್ಮೀರ ಸೇರಿದಂತೆ ಇತರೆ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲು ಬಯಸುವುದಿಲ್ಲ’ ಎಂದು ನೇರಾನೇರವಾಗಿ ಹೇಳಿದ್ದಾರೆ.
ಈ ಬೆಳವಣಿಗೆಯಿಂದ ಶೆಹಬಾಜ್ ಭಾರೀ ಮುಖಭಂಗ ಅನುಭವಿಸುಂತಾಯಿತು. ಇದು ಜಗತ್ತಿನಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಹೀಗಾಗಿ ಇನ್ನು ಮುಂದಾದರೂ ಪಾಕಿಸ್ತಾನ ದೇಶಕ್ಕೆ ಬಂದವರ ಮುಂದೆ ಕಾಶ್ಮೀರ ವಿಷಯ ಪ್ರಸ್ತಾಪ ಕೈಬಿಡಬೇಕು ಎಂದು ಈ ಬೆಳವಣಿಗೆಗಳ ಕುರಿತು ಪಾಕಿಸ್ತಾನದ ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
;Resize=(128,128))
;Resize=(128,128))