ಮಹಾರಾಷ್ಟ್ರದ ಚುನಾವಣೆ: ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಕೈಹಿಡಿದ ಮಹಿಳೆಯರು

| Published : Nov 24 2024, 01:49 AM IST / Updated: Nov 24 2024, 04:32 AM IST

ಸಾರಾಂಶ

 ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಚುನಾವಣೆಗೂ ಮುನ್ನ ಸರ್ಕಾರ ಜಾರಿಗೆ ತಂದ ‘ಲಡ್ಕಿ ಬೆಹೆನ್‌’ ಯೋಜನೆಯ ಪಾತ್ರ ದೊಡ್ಡದಿದೆ.

ಮುಂಬೈ:ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಚುನಾವಣೆಗೂ ಮುನ್ನ ಸರ್ಕಾರ ಜಾರಿಗೆ ತಂದ ‘ಲಡ್ಕಿ ಬೆಹೆನ್‌’ ಯೋಜನೆಯ ಪಾತ್ರ ದೊಡ್ಡದಿದೆ.

2.36 ಕೋಟಿ ಮಹಿಳಾ ಮತದಾರರ ಖಾತೆಗೆ ತಿಂಗಳಿಗೆ 1500 ರು.ಗಳಂತೆ ಐದು ತಿಂಗಳ 7500 ರು. ಮೊತ್ತವನ್ನು ಸರ್ಕಾರ ಒಂದೇ ಬಾರಿಗೆ ಜಮೆ ಮಾಡಿತ್ತು. ಅಲ್ಲದೆ, ಮಹಾಯುತಿ ಪುನಃ ಗೆದ್ದರೆ ಈ ಹಣವನ್ನು ತಕ್ಷಣ 2100 ರು.ಗೆ ಏರಿಸುವುದಾಗಿಯೂ, ಬಳಿಕ 3000 ರು.ಗೆ ಏರಿಸುವುದಾಗಿಯೂ ಭರವಸೆ ನೀಡಿತ್ತು. ಅದಕ್ಕೆ ಮಹಿಳಾ ಮತದಾರರು ಮನಸೋತಿದ್ದಾರೆ.

ಇದಕ್ಕೆ ಪ್ರತಿಯಾಗಿ ವಿಪಕ್ಷದ ಮಹಾವಿಕಾಸ ಅಘಾಡಿ ಮೈತ್ರಿಕೂಟ ತಾನು ಗೆದ್ದರೆ ‘ಮಹಾಲಕ್ಷ್ಮಿ ಯೋಜನೆ’ ಜಾರಿಗೆ ತಂದು ಮಹಿಳೆಯರಿಗೆ ಪ್ರತಿ ತಿಂಗಳು 4000 ರು. ನೀಡುವುದಾಗಿ ಹಾಗೂ ಒಟ್ಟು 5 ಗ್ಯಾರಂಟಿ ನೀಡುವುದಾಗಿ ಘೋಷಿಸಿದ್ದು ಫಲ ನೀಡಲಿಲ್ಲ.