ದೇಹದ ಪ್ರತಿಕಾಯ ವ್ಯವಸ್ಥೆ ಸಂಶೋಧಕರಿಗೆ ವೈದ್ಯ ನೊಬೆಲ್

| N/A | Published : Oct 07 2025, 01:02 AM IST / Updated: Oct 07 2025, 03:53 AM IST

ದೇಹದ ಪ್ರತಿಕಾಯ ವ್ಯವಸ್ಥೆ ಸಂಶೋಧಕರಿಗೆ ವೈದ್ಯ ನೊಬೆಲ್
Share this Article
  • FB
  • TW
  • Linkdin
  • Email

ಸಾರಾಂಶ

  ಉತ್ಕೃಷ್ಟ ಸಾಧನೆ ಮಾಡಿದವರಿಗೆ ಕೊಡಮಾಡುವ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿಯ ಘೋಷಣೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ವೈದ್ಯಕೀಯ ನೊಬೆಲ್‌ಗೆ ಅಮೆರಿಕದ ಮೆರಿ ಇ ಬ್ರುನ್ಕೋವ್‌, ಫ್ರೆಡ್‌ ರಾಮ್ಸ್‌ಡೆಲ್‌ ಮತ್ತು ಜಪಾನ್‌ನ ಹಿರಿಯ ಸಂಶೋಧಕ ಶಿಮೋನ್‌ ಸಕಾಗುಚಿ ಅವರು ಆಯ್ಕೆ 

 ಸ್ಟಾಕ್‌ಹೋಮ್‌ :  ವಿಜ್ಞಾನ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಿದವರಿಗೆ ಕೊಡಮಾಡುವ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿಯ ಘೋಷಣೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ವೈದ್ಯಕೀಯ ನೊಬೆಲ್‌ಗೆ ಅಮೆರಿಕದ ಮೆರಿ ಇ ಬ್ರುನ್ಕೋವ್‌, ಫ್ರೆಡ್‌ ರಾಮ್ಸ್‌ಡೆಲ್‌ ಮತ್ತು ಜಪಾನ್‌ನ ಹಿರಿಯ ಸಂಶೋಧಕ ಶಿಮೋನ್‌ ಸಕಾಗುಚಿ ಅವರು ಆಯ್ಕೆಯಾಗಿದ್ದಾರೆ.

ದೇಹದ ಪ್ರತಿರಕ್ಷಣಾ ವ್ಯವಸ್ಥೆ ತನ್ನದೇ ಅಂಗದ ಮೇಲೆ ದಾಳಿ ಮಾಡುವುದನ್ನು ಯಾವ ರೀತಿ ತಡೆಯುತ್ತದೆ (peripheral immune tolerance) ಎಂಬುದನ್ನು ವಿವರಿಸುವ ಸಂಶೋಧನೆಗಾಗಿ ಈ ಮೂವರನ್ನು ವಿಶ್ವದ ಈ ಅತ್ಯುನ್ನತ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಸಂಶೋಧನೆ ಮಹತ್ವ:

ಈ ಸಂಶೋಧನೆಯು ಮಾನವ ಸ್ವಾಸ್ಥ್ಯ ಹಾಗೂ ರೋಗಗಳ ಕುರಿತು ಅಧ್ಯಯನಕ್ಕೆ ಹೊಸ ಹೊಳಹು ನೀಡಿದೆ. ಈ ಸಂಶೋಧನೆಯು ಅಟೋ ಇಮ್ಯೂನ್‌ ರೋಗಗಳ ಚಿಕಿತ್ಸೆಯಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಮೂವರ ಸಂಶೋಧನೆ ಪ್ರತಿಕಾಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರತಿಯೊಬ್ಬರಿಗೂ ಯಾಕೆ ಅಟೋಇಮ್ಯೂನ್‌ ರೋಗಗಳು ಬರುವುದಿಲ್ಲ ಎಂಬುದನ್ನು ಅರಿಯುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ನೊಬೆಲ್‌ ಪ್ರಶಸ್ತಿ ಸಮಿತಿ ಅಧ್ಯಕ್ಷ ಓಲೆ ಕೆಂಪೆ ಹೇಳಿದ್ದಾರೆ.

ಈ ಮೂವರೂ ಸುಮಾರು 10.35 ಕೋಟಿ ರು. ಪ್ರಶಸ್ತಿ ಮೊತ್ತವನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ.

ಇಂದು ಭೌತಶಾಸ್ತ್ರ ನೊಬೆಲ್

ವಿಶ್ವದ ಪ್ರತಿಷ್ಠಿತ ನೊಬೆಲ್‌ ಪ್ರಶಸ್ತಿ ಘೋಷಣೆ ಕಾರ್ಯ ಸೋಮವಾರದಿಂದ ಆರಂಭವಾಗಿದ್ದು, ಮಂಗಳವಾರ ಭೌತಶಾಸ್ತ್ರದಲ್ಲಿನ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗುವುದು.

Read more Articles on