ಸಾರಾಂಶ
- ಶಕ್ತಿ ಯೋಜನೆಯಡಿ 500 ಕೋಟಿಯ ಟಿಕೆಟ್ ವಿತರಿಸಿ ಸಿಎಂ ಸಂಭ್ರಮ
- 30 ಸ್ತ್ರೀಯರಿಗೆ ಇಳಕಲ್ ಸೀರೆ, ಶಾಲು, ಸಿಹಿ, ಗುಲಾಬಿ ನೀಡಿದ ಸಿದ್ದು ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯಡಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ 500 ಕೋಟಿ ತಲುಪಿದೆ. ಈ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸೋಮವಾರ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಕಂಡಕ್ಟರ್ ರೀತಿ ಖುದ್ದು ಟಿಕೆಟ್ ನೀಡಿದರು. 500 ಕೋಟಿ ಸಂಭ್ರಮದ ಅಂಗವಾಗಿ ಗುಲಾಬಿ ಬಣ್ಣದ ಟಿಕೆಟ್ ವಿತರಿಸಿದರು. ಇದೇ ವೇಳೆ, ಬಸ್‌ನಲ್ಲಿದ್ದ 30 ಮಹಿಳೆಯರಿಗೆ ಇಳಕಲ್ ಸೀರೆ, ಗುಲಾಬಿ, ಸಿಹಿ ಕೊಟ್ಟು, ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತಿತರರಿದ್ದರು.
ಸಿಎಂ-ಡಿಸಿಎಂಗೆ ರೊಟ್ಟಿ ಗಿಫ್ಟ್‌ವಿಜಯಪುರದ ಒಡಲ ಧ್ವನಿ ಸ್ತ್ರೀ ಸಂಘ ಶಕ್ತಿ ಯೋಜನೆ ಜಾರಿ ನಂತರ ಸಾವಯವ ರೊಟ್ಟಿ, ಶೇಂಗಾ ಹೋಳಿಗೆ ತಯಾರಿಸಿ ಬೆಂಗಳೂರಿಗೆ ತಂದು ಮಾರಾಟ ಮಾಡಿ ಲಕ್ಷಾಂತರ ರು. ವಹಿವಾಟು ನಡೆಸಿದೆ. ಈ ಯಶಸ್ಸಿಗಾಗಿ ಸಂಘದ ಸದಸ್ಯರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ ಅವರಿಗೆ ಸಾವಯವ ಖಡಕ್ ರೊಟ್ಟಿ, ಶೇಂಗಾ ಹೋಳಿಗೆಗಳನ್ನು ನೀಡಿ ಗೌರವ ಸಲ್ಲಿಸಿದರು.