ಸಾರಾಂಶ
ನನಗೆ ಅಧಿಕೃತ ಮಾಹಿತಿ ಬಂದಿಲ್ಲನಾನು ಕೆತ್ತಿದ ವಿಗ್ರಹ ಆಯ್ಕೆಯಾಗಿದೆಯೋ? ಇಲ್ಲವೋ ಎಂಬುದರ ಕುರಿತು ಈವರೆಗೆ ನನಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಬಿಜೆಪಿ ನಾಯಕರ ಟ್ವೀಟರ್ ಪೋಸ್ಟ್‌ಗಳು ನನ್ನ ವಿಗ್ರಹ ಆಯ್ಕೆಯಾಗಿರಬಹುದು ಎಂಬ ನಂಬಿಕೆಯನ್ನು ಮೂಡಿಸಿದೆ. ಏನೇ ಆದರೂ ಮುಖ್ಯ ವಿಗ್ರಹ ಕೆತ್ತಲು ಆಯ್ಕೆಯಾದ ದೇಶದ ಮೂವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ, ಖುಷಿ ನನಗಿದೆ.- ಅರುಣ್ ಯೋಗಿರಾಜ್, ಮೈಸೂರಿನ ಶಿಲ್ಪಿ--ನವದೆಹಲಿ: ಜ.22ರಂದು ಉದ್ಘಾಟನೆಯಾಗಲಿರುವ ಅಯೋಧ್ಯೆಯ ನೂತನ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳಲು ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ ಎಂಬ ವದಂತಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿದೆ. ಈ ಬಗ್ಗೆ ಅಧಿಕೃತವಾಗಿ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಭಗವಂತ ಖೂಬಾ, ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ, ಪಿ.ಸಿ. ಮೋಹನ್ ಸೇರಿದಂತೆ ಹಲವಾರು ನಾಯಕರು ಮೈಸೂರು ಶಿಲ್ಪಿಯ ವಿಗ್ರಹ ಆಯ್ಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.ಈ ಕುರಿತು ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀರಾಮಮಂದಿರ ನಿರ್ಮಾಣ ಟ್ರಸ್ಟ್ ಇದುವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಈ ನಡುವೆ ತಾವು ಕೆತ್ತಿದ ವಿಗ್ರಹ ಆಯ್ಕೆಯಾಗಿದೆ ಎಂಬ ವದಂತಿ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಅರುಣ್, ‘ನಾನು ಕೆತ್ತಿದ ವಿಗ್ರಹ ಆಯ್ಕೆಯಾಗಿದೆಯೋ? ಇಲ್ಲವೋ ಎಂಬುದರ ಕುರಿತು ಈವರೆಗೆ ನನಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಬಿಜೆಪಿ ನಾಯಕರ ಟ್ವೀಟರ್ ಪೋಸ್ಟ್‌ಗಳು, ನನ್ನ ವಿಗ್ರಹ ಆಯ್ಕೆಯಾಗಿರಬಹುದು ಎಂಬ ನಂಬಿಕೆಯನ್ನು ಮೂಡಿಸಿದೆ. ಏನೇ ಆದರೂ ಮುಖ್ಯ ವಿಗ್ರಹ ಕೆತ್ತಲು ಆಯ್ಕೆಯಾದ ದೇಶದ ಮೂವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ, ಖುಷಿ ನನಗಿದೆ’ ಎಂದು ಹೇಳಿದ್ದಾರೆ.ಕರ್ನಾಟಕದ ಅರುಣ್ ಯೋಗಿರಾಜ್, ಕರ್ನಾಟಕದ ಇಡಗುಂಜಿಯ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ತಲಾ ಒಂದೊಂದು ಬಾಲರಾಮನ ವಿಗ್ರಹ ಕೆತ್ತುವ ಹೊಣೆ ವಹಿಸಲಾಗಿತ್ತು.