ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆ ಚುನಾವಣೆ ಎದುರಿಸಲು ಹಣವಿಲ್ಲ. ಪಕ್ಷ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ, ಜನರು ದೇಣಿಗೆ ನೀಡಿ ಧನಸಹಾಯ ಮಾಡಬೇಕು ಎಂದು ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೊರಾಹ್‌ ಮನವಿ ಮಾಡಿದ್ದಾರೆ.

ಗುವಾಹಟಿ: ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆ ಚುನಾವಣೆ ಎದುರಿಸಲು ಹಣವಿಲ್ಲ. ಪಕ್ಷ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ, ಜನರು ದೇಣಿಗೆ ನೀಡಿ ಧನಸಹಾಯ ಮಾಡಬೇಕು ಎಂದು ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೊರಾಹ್‌ ಮನವಿ ಮಾಡಿದ್ದಾರೆ. 

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆ ಬಂದ್‌ ಮಾಡಿದೆ. ಜೊತೆಗೆ ಈಗಾಗಲೇ 1500 ಕೋಟಿ ರು.ಗಳನ್ನು ದಂಡ ರೂಪದಲ್ಲಿ ಪಡೆದುಕೊಂಡಿದೆ, ಇನ್ನಷ್ಟು ದಂಡಕ್ಕೆ ನೋಟಿಸ್‌ ನೀಡಿದೆ. ಬಂದ್‌ ಆಗಿರುವ ಕಾಂಗ್ರೆಸ್‌ ಬ್ಯಾಂಕ್‌ ಖಾತೆಗಳನ್ನು ನ್ಯಾಯಯುತವಾಗಿ ಮರುಕಳಿಸದಿದ್ದರೆ, ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.