ಸಾರಾಂಶ
ತಿರುವನಂತಪುರ: ರೈಲು ಚಾಲಕರಿಗೆ ಸಾಫ್ಟ್ ಡ್ರಿಂಕ್ ನಿಷೇಧ ಆದೇಶವನ್ನು ದಕ್ಷಿಣ ರೈಲ್ವೆಯ ತಿರುವನಂತಪುರ ವಿಭಾಗ ವಾಪಸ್ ಪಡೆದಿದೆ. ದೋಷಪೂರಿತ ಬ್ರೀತ್ ಅನಲೈಸರ್ ಯಂತ್ರಗಳು ಸಾಫ್ಟ್ ಡ್ರಿಂಕ್ ಕುಡಿದರೂ ಮದ್ಯ ಕುಡಿದಿದ್ದಾರೆ ಎಂದು ತೋರಿಸುತ್ತಿದ್ದವು. ಹೀಗಾಗಿ ಚಾಲಕರಿಗೆ ಸಾಫ್ಟ್ ಡ್ರಿಂಕ್ ನಿಷೇಧಿಸಲಾಗಿತ್ತು. ಆದರೆ ಚಾಲಕರ ಆಕ್ರೋಶದ ಕಾರಣ ಆದೇಶ ಹಿಂಪಡೆಯಲಾಗಿದೆ.
4ನೇ ಬಾರಿ ಕುಂಭದಲ್ಲಿ ಅಗ್ನಿ ಅವಘಡ: ಸಾವು ನೋವಿಲ್ಲ
ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 4 ಬಾರಿ ಅಗ್ನಿ ಅವಘಡ ಸಂಭವಿಸಿದೆ. ಸುದೈವವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ಶುಕ್ರವಾರ ಸಂಜೆ 4 ಗಂಟೆ ಹೊತ್ತಿಗೆ ಇಲ್ಲಿನ ಸೆಕ್ಟರ್ 25ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 2 ಟೆಂಟ್‌ಗಳು ಭಸ್ಮವಾಗಿವೆ. ಕೂಡಲೇ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಕಾರಣ ಇನ್ನು ತಿಳಿದುಬಂದಿಲ್ಲ.
ಜ.19ರಂದು ಸೆಕ್ಟರ್ 19ರಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಜ.25ರಂದು ಶಾರ್ಟ್ ಸರ್ಕಿಟ್‌ನಿಂದಾಗಿ 2 ಕಾರುಗಳು ಬೆಂಕಿಗಾಹುತಿಯಾಗಿದ್ದವು. ಫೆ.7ರಂದು ಇಸ್ಕಾನ್ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡು 12ಕ್ಕೂ ಹೆಚ್ಚು ಟೆಂಟ್‌ಗಳು ಭಸ್ಮವಾಗಿದ್ದವು.