ಸಾರಾಂಶ
ಆಕಸ್ಮಿಕವಾಗಿ ಗಡಿ ದಾಟಿ ಪ್ರಸ್ತುತ ಪಾಕಿಸ್ತಾನಿ ಸೇನೆಯ ವಶದಲ್ಲಿರುವ ಭಾರತೀಯ ಯೋಧ ಪಿ.ಕೆ. ಶಾ ಅವರ ಬಿಡುಗಡೆಗಾಗಿ ನಡೆದ ಮೂರೂ ಧ್ವಜ ಸಭೆಗಳು ವಿಫಲವಾಗಿವೆ ಎಂದು ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಚೌಧರಿ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಶ್ರೀನಗರ: ಆಕಸ್ಮಿಕವಾಗಿ ಗಡಿ ದಾಟಿ ಪ್ರಸ್ತುತ ಪಾಕಿಸ್ತಾನಿ ಸೇನೆಯ ವಶದಲ್ಲಿರುವ ಭಾರತೀಯ ಯೋಧ ಪಿ.ಕೆ. ಶಾ ಅವರ ಬಿಡುಗಡೆಗಾಗಿ ನಡೆದ ಮೂರೂ ಧ್ವಜ ಸಭೆಗಳು ವಿಫಲವಾಗಿವೆ ಎಂದು ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಚೌಧರಿ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
‘ಏ.23ರಂದು ಬಿಎಸ್‌ಎಫ್‌ನ ಯೋಧ ಶಾ ಫಿರೋಜ್‌ಪುರದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದರು. ಪಾಕ್ ವಶದಲ್ಲಿರುವ ಅವರ ಬಿಡುಗಡೆಗಾಗಿ ಸೇನಾಧಿಕಾರಿಗಳ ಜತೆ ಕಳೆದ 48 ಗಂಟೆಗಳಲ್ಲಿ 3 ಧ್ವಜ ಸಭೆಗಳನ್ನು ನಡೆಸಿದ್ದೇವೆ. ಆದರೆ ಪ್ರಯತ್ನ ಫಲ ಕೊಟ್ಟಿಲ್ಲ’ ಎಂದು ಚೌಧರಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಅವರಿಗೆ ತಿಳಿಸಿದ್ದಾರೆ.
ಭಾರತದ ಪ್ರತಿದಾಳಿಗಳಿಂದ ಭೀತಗೊಂಡಿರುವ ಪಾಕಿಸ್ತಾನ ಭಾರತೀಯ ಯೋಧನನ್ನು ಹಿಡಿದಿಟ್ಟುಕೊಳ್ಳುವ ಮೂಲಕ ರಕ್ಷಣಾತ್ಮಕ ತಂತ್ರ ಪ್ರಯೋಗಿಸಿದೆ. ಅವರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.