ಚುನಾವಣಾ ಆಯೋಗ ಕಚೇರಿ ಎದುರು ಟಿಎಂಸಿ ಪ್ರತಿಭಟನೆ

| Published : Apr 09 2024, 12:52 AM IST / Updated: Apr 09 2024, 03:58 AM IST

ಸಾರಾಂಶ

ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ., ಎನ್‌ಐಎ ಹಾಗೂ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರನ್ನು ಬದಲಿಸುವಂತೆ ಆಗ್ರಹಿಸಿ ಟಿಎಂಸಿ ಪಕ್ಷದ ನಾಯಕರು ಸೋಮವಾರ ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ., ಎನ್‌ಐಎ ಹಾಗೂ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರನ್ನು ಬದಲಿಸುವಂತೆ ಆಗ್ರಹಿಸಿ ಟಿಎಂಸಿ ಪಕ್ಷದ ನಾಯಕರು ಸೋಮವಾರ ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜೊತೆಗೆ ಟಿಎಂಸಿ ಸಂಸದರಾದ ಡೆರಿಕ್‌ ಒಬ್ರಿಯಾನ್‌ ಅವರ ನಿಯೋಗ ಆಯೋಗಕ್ಕೆ ಮನವಿ ಸಲ್ಲಿಸಿತು. ಆದರೆ ಪ್ರತಿಭಟನೆ ಜೋರಾಗುತ್ತಿದ್ದಂತೆ ಡೆರೆಕ್‌ ಸೇರಿದಂತೆ ಟಿಎಂಸಿ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.

ಈ ಕುರಿತು ಮಾತನಾಡಿದ ಟಿಎಂಸಿ ನಾಯಕರ ನಿಯೋಗ,‘ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ನಾಯಕರ ಮೇಲೆ ದಾಳಿ ಮಾಡಲು ಬಳಸಿಕೊಳ್ಳುತ್ತಿದೆ. ಹಾಗಾಗಿ ಅದರ ಮುಖ್ಯಸ್ಥರನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿತು.