ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ವಿರುದ್ಧ ಜಗ್ಮೀತ್‌ ಬಂಡಾಯ : ಅವಿಶ್ವಾಸ ನಿರ್ಣಯ ಪರ ಮತ ಘೋಷಣೆ

| Published : Dec 21 2024, 01:19 AM IST / Updated: Dec 21 2024, 04:23 AM IST

ಸಾರಾಂಶ

ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದರೆ ಅದರ ಪರ ಮತ ಹಾಕುತ್ತೇವೆ ಎಂದು ಮಿತ್ರಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಜಗ್ಮೀತ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.

ಒಟ್ಟಾವ: ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಗೆ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದರೆ ಅದರ ಪರ ಮತ ಹಾಕುತ್ತೇವೆ ಎಂದು ಮಿತ್ರಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಜಗ್ಮೀತ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಅವರ ಪಕ್ಷವು ಟ್ರುಡೊ ಅವರ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಆದರೂ ಸರ್ಕಾರ ಬೀಳಿಸುವ ಯತ್ನ ಮಾಡಿರಲಿಲ್ಲ. ಈಗ ಬಹಿರಂಗ ಪತ್ರದ ಮೂಲಕ ಸಿಂಗ್ ಸರ್ಕಾರ ಬೀಳಿಸುವ ಘೋಷಣೆ ಮಾಡಿದ್ದಾರೆ.ಪತ್ರದಲ್ಲಿ, ಸಿಂಗ್ ಅವರು ಟ್ರುಡೊ ಅವರ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ, ‘ಜಸ್ಟಿನ್ ಟ್ರುಡೊ ಅವರು ಪ್ರಧಾನ ಮಂತ್ರಿಯ ದೊಡ್ಡ ಕೆಲಸದಲ್ಲಿ ವಿಫಲರಾಗಿದ್ದಾರೆ: ಜನರಿಗಾಗಿ ಕೆಲಸ ಮಾಡಲು, ಶಕ್ತಿಯುತವಾಗಿಲ್ಲ’ ಎಂದು ಹೇಳಿದ್ದಾರೆ.