ಭಾರತ ಸೇರಿದಂತೆ ವಿದೇಶಗಳಿಗೆ ನೀಡುವ ಯುಎಸ್‌ ಏಡ್‌ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಹಾರ

| N/A | Published : Feb 25 2025, 12:46 AM IST / Updated: Feb 25 2025, 06:01 AM IST

US President Donald Trump (File Photo/Reuters)

ಸಾರಾಂಶ

ಭಾರತ ಸೇರಿದಂತೆ ವಿದೇಶಗಳಿಗೆ ಅಮೆರಿಕ ನೀಡುವ ನೆರವಾದ ‘ಯುಎಸ್‌ ಏಡ್’ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಅದರ ವಿರುದ್ಧ ಪ್ರಹಾರ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ 1600 ಯುಎಸ್‌ ಏಡ್‌ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ ಹಾಗೂ ಉಳಿದ ಸಿಬ್ಬಂದಿಗೆ ಕಡ್ಡಾಯ ರಜೆ ವಿಧಿಸಿದ್ದಾರೆ.

ವಾಷಿಂಗ್ಟನ್‌: ಭಾರತ ಸೇರಿದಂತೆ ವಿದೇಶಗಳಿಗೆ ಅಮೆರಿಕ ನೀಡುವ ನೆರವಾದ ‘ಯುಎಸ್‌ ಏಡ್’ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಅದರ ವಿರುದ್ಧ ಪ್ರಹಾರ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ 1600 ಯುಎಸ್‌ ಏಡ್‌ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ ಹಾಗೂ ಉಳಿದ ಸಿಬ್ಬಂದಿಗೆ ಕಡ್ಡಾಯ ರಜೆ ವಿಧಿಸಿದ್ದಾರೆ.

ಯುಎಸ್‌ಏಡ್‌ನಡಿ ವಿಶ್ವಾದ್ಯಂತ ಕೆಲಸ ಮಾಡುತ್ತಿರುವ ನಾಯಕರು ಮತ್ತು ಅನಿವಾರ್ಯ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದೆಲ್ಲ ನೌಕರರಿಗೆ ಈ ಆದೇಶ ಅನ್ವಯವಾಗಲಿದೆ.

ಇದು ಟ್ರಂಪ್‌ ಸರ್ಕಾರ ಅಧಿಕಾರಕ್ಕೆ ಬಂದ ಬ‍ಳಿಕ ವೆಚ್ಚ ಕಡಿತದ ನಿಟ್ಟಿನಲ್ಲಿ ಕೈಗೊಂಡ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈಗಾಗಲೇ ಯುಎಸ್‌ ಏಡ್‌ ದುರ್ಬಳಕೆಯಾಗುತ್ತಿದೆ ಎಂದು ಟ್ರಂಪ್‌ ಅನೇಕ ಬಾರಿ ಹೇಳಿದ್ದಾರೆ. ಭಾರತದ ಚುನಾವಣಾ ಸುಧಾರಣೆಗೆ 180 ಕೋಟಿ ರು. ಅನ್ನು ಯುಎಸ್‌ಏಡ್‌ನಡಿ ನೀಡಲಾಗಿತ್ತು. ಮೂಲಕ ಭಾರತದಲ್ಲಿ ಸರ್ಕಾರ ಬದಲಾವಣೆಯ ಪ್ರಯತ್ನ ನಡೆದಿತ್ತು ಎಂದು ಅವರು ದೂರಿದ್ದರು.

ಈಗಾಗಲೇ ಅಮೆರಿಕ ಸರ್ಕಾರವು ವಿಶ್ವಾದ್ಯಂತ ಯುಎಸ್‌ಏಡ್‌ನಡಿ ವಿವಿಧ ಯೋಜನೆಗಳಿಗೆ ನೀಡಲಾಗುತ್ತಿರುವ ಹಣಕಾಸು ನೆರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.

ಈ ಹಿಂದೆ ಯುಎಸ್‌ಏಡ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 2000 ಸಿಬ್ಬಂದಿಯನ್ನು ವಜಾ ಮಾಡುವುದಾಗಿ ಹೇಳಲಾಗಿತ್ತು. ಇದೀಗ 1600 ಮಂದಿಯನ್ನು ಕಡಿತಗೊಳಿಸಲಾಗಿದೆ.