ಟ್ವೀಟರ್‌ನಲ್ಲಿ ‘# ಟ್ರಂಪ್‌ ಈಸ್‌ ಡೆಡ್‌’ ನದ್ದೇ ಸದ್ದು!

| N/A | Published : Aug 31 2025, 02:00 AM IST

ಸಾರಾಂಶ

ಟ್ರಂಪ್‌ ಈಸ್‌ ಡೆಡ್‌ (ಟ್ರಂಪ್‌ ಮೃತಪಟ್ಟಿದ್ದಾರೆ) ಎಂಬ ವಿಚಾರ ಇದೀಗ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ರಂಪ್‌ ಈಸ್‌ ಡೆಡ್‌ ಹ್ಯಾಷ್‌ಟ್ಯಾಗ್‌ನಡಿ ಒಂದು ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿವೆ.

 ವಾಷಿಂಗ್ಟನ್‌: ಟ್ರಂಪ್‌ ಈಸ್‌ ಡೆಡ್‌ (ಟ್ರಂಪ್‌ ಮೃತಪಟ್ಟಿದ್ದಾರೆ) ಎಂಬ ವಿಚಾರ ಇದೀಗ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಟ್ರಂಪ್‌ ಈಸ್‌ ಡೆಡ್‌ ಹ್ಯಾಷ್‌ಟ್ಯಾಗ್‌ನಡಿ ಒಂದು ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗುತ್ತಿವೆ.

ಆ.27ರಂದು ಯುಎಸ್‌ಎ ಟುಡೆ ಪತ್ರಿಕೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ನೀಡಿದ ಸಂದರ್ಶನದ ಬೆನ್ನಲ್ಲೇ ಈ ಕುರಿತ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿವೆ.

ಸಂದೇಶಕ್ಕೇನು ಕಾರಣ?:

‘ಒಂದು ವೇಳೆ ಟ್ರಂಪ್‌ಗೆ ಸಂಬಂಧಿಸಿ ಭಾರೀ ದುರಂತವೇನಾದರೂ ಸಂಭವಿಸಿದರೆ ಅದನ್ನು ನಿಭಾಯಿಸಲು ನೀವು ಸಿದ್ಧರಿದ್ದೀರಾ?’ ಎಂಬ ಪ್ರಶ್ನೆಗೆ ವ್ಯಾನ್ಸ್ ಉತ್ತರಿಸಿ, ‘79 ವರ್ಷದ ಟ್ರಂಪ್‌ ಆರೋಗ್ಯದಿಂದಿದ್ದಾರೆ. ಟ್ರಂಪ್‌ ತಮ್ಮ ಅಧಿಕಾರಾವಧಿಯ ಉಳಿದ ಅವಧಿಯಲ್ಲಿ ಅಮೆರಿಕನ್ನರಿಗೆ ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಆದರೂ ದುರದೃಷ್ಟವಶಾತ್‌ ಅನಾಹುತವೇನಾದರೂ ಘಟಿಸಿದರೆ ನನ್ನ ಅಗತ್ಯಬಿದ್ದಲ್ಲಿ ನೇತೃತ್ವ ವಹಿಸಿಕೊಳ್ಳಲು ಸಿದ್ಧನಿದ್ದೇನೆ’ ಎಂದಿದ್ದರು.

‘ಕಳೆದ 200 ದಿನಗಳಲ್ಲಿ ಟ್ರಂಪ್‌ರಿಂದ ನನಗೆ ಉತ್ತಮ ತರಬೇತಿ ಸಿಕ್ಕಿದೆ’ ಎಂದೂ ಇದೇ ವೇಳೆ ಅವರು ತಿಳಿಸಿದ್ದರು.ಇದರ ಬೆನ್ನಲ್ಲೇ ಉತ್ತರಾಧಿಕಾರಿ ವಿಚಾರವಾಗಿ ವ್ಯಾನ್ಸ್‌ ಅವರು ನೀಡಿದ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ‘ಟ್ರಂಪ್‌ ಮೃತಪಟ್ಟಿದ್ದಾರೆ’ ಎಂಬ ಟ್ರೆಂಡ್‌ ಸದ್ದು ಮಾಡಲು ಕಾರಣವಾಗಿದೆ.

ಟ್ರಂಪ್‌ಗೆ ಕೆಲವು ರೋಗಗಳಿವೆ. ಅವರ ಕೈ ಹಾಗೂ ಡ್ಲು ಸಮಸ್ಥಿತಿಯಲ್ಲಿಲ್ಲ ಎಂದು ಇತ್ತೀಚೆಗೆ ಸಂದೇಶಗಳು ಹರಿದಾಡಿದ್ದವು.

Read more Articles on