ಸಾರಾಂಶ
ಈಗಾಗಲೇ ಚೀನಾ, ಕೆನಡಾ, ಮೆಕ್ಸಿಕೋ ವಿರುದ್ಧ ತೆರಿಗೆ ಸಮರ ಸಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುರುವಾರ ಇನ್ನಷ್ಟು ತೆರಿಗೆ ದಾಳಿಯ ಘೋಷಣೆ ಮಾಡಿದ್ದಾರೆ.
ವಾಷಿಂಗ್ಟನ್: ಈಗಾಗಲೇ ಚೀನಾ, ಕೆನಡಾ, ಮೆಕ್ಸಿಕೋ ವಿರುದ್ಧ ತೆರಿಗೆ ಸಮರ ಸಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗುರುವಾರ ಇನ್ನಷ್ಟು ತೆರಿಗೆ ದಾಳಿಯ ಘೋಷಣೆ ಮಾಡಿದ್ದಾರೆ. ಇತರ ದೇಶಗಳ ಆಮದುಗಳ ಮೇಲೆ ವಿಧಿಸುವ ತೆರಿಗೆ ದರಗಳನ್ನು ಹೊಂದಿಸಲು ಅಮೆರಿಕ ಸುಂಕದ ಮೇಲೆ ಹೆಚ್ಚಳವನ್ನು ಘೋಷಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಟ್ರೂತ್‌ನಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಟ್ರಂಪ್, ‘ಗುರುವಾರ ನಂತರ ಅಮೆರಿಕವು ಪರಸ್ಪರ ಸುಂಕಗಳನ್ನು ಅನಾವರಣಗೊಳಿಸಲಿದೆ. ಇದು ಆರ್ಥಿಕ ನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತದೆ. ಪರಸ್ಪರ ಸುಂಕಗಳು ಅಮೆರಿಕವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿ ಮಾಡುತ್ತದೆ’ ಎಂದಿದ್ದಾರೆ.