- ಈ ಬಾರಿ ಅಟ್ಯಾಕ್‌ ಘೋರವಾಗಿರುತ್ತೆ


- ಇರಾನ್‌ ಬಳಿಯಿಂದ ಸೇನೆ ವಾಪಸಿಲ್ಲ

ವಾಷಿಂಗ್ಟನ್‌: ಲೆಬನಾನ್‌ ವಿಷಯದಲ್ಲಿನ ಗೊಂದಲದ ಕಾರಣ, ಅಮೆರಿಕ-ಇರಾನ್‌ ಕದನ ವಿರಾಮ ತೂಗುಯ್ಯಾಲೆಯಾಗಿರುವ ನಡುವೆಯೇ, ‘ಪೂರ್ಣ ಕದನವಿರಾಮ ಘೋಷಣೆ ಆಗುವವರೆಗೆ ಇರಾನ್‌ ಸುತ್ತಮುತ್ತಲಿನ ಭಾಗಗಳಿಂದ ನಮ್ಮ ಸೇನೆಯನ್ನು ಹಿಂಪಡೆಯುವುದಿಲ್ಲ. ಪೂರ್ಣ ಒಪ್ಪಂದವನ್ನು ಇರಾನ್‌ ಪಾಲಿಸದಿದ್ದರೆ ಹಿಂದಿಗಿಂತಲೂ ದೊಡ್ಡ ದಾಳಿ ಮಾಡಲಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಗುಡುಗಿದ್ದಾರೆ.

ಗುರುವಾರ ಬೆಳಗ್ಗೆ ಟ್ರುತ್‌ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಅಮೆರಿಕದ ಎಲ್ಲಾ ಹಡಗುಗಳು, ವಿಮಾನಗಳು ಮತ್ತು ಮಿಲಿಟರಿ ಪಡೆಗಳು, ಹೆಚ್ಚುವರಿ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳೊಂದಿಗೆ ಇರಾನ್‌ನಲ್ಲಿ ಮತ್ತು ಅದರ ಸುತ್ತಮುತ್ತಲ ಸ್ಥಳದಲ್ಲಿಯೇ ಇರುತ್ತವೆ. ‘ನಿಜವಾದ ಒಪ್ಪಂದ’ವನ್ನು ಇರಾನ್‌ ಸಂಪೂರ್ಣವಾಗಿ ಪಾಲಿಸುವವರೆಗೆ ಇದು ಮುಂದುವರಿಯುತ್ತದೆ. ಯಾವುದೇ ಕಾರಣಕ್ಕಾಗಿ ಅದು ಹಾಗೆ ಆಗದಿದ್ದರೆ, ದಾಳಿ ಶುರುವಾಗುತ್ತದೆ. ಅದು ಯಾರೂ ಹಿಂದೆಂದೂ ನೋಡಿರದಷ್ಟು ದೊಡ್ಡದಾಗಿರುತ್ತದೆ ಮತ್ತು ಬಲವಾಗಿರುತ್ತದೆ’ ಎಂದು ಎಚ್ಚರಿಸಿದ್ದಾರೆ.

ಈ ಮೂಲಕ ತಾತ್ಕಾಲಿಕ ಕದನವಿರಾಮವನ್ನು ತಾವು ಅಷ್ಟಾಗಿ ನಂಬುವುದಿಲ್ಲ ಎಂದು ಇರಾನ್‌ಗೆ ಸೂಚ್ಯವಾಗಿ ಹೇಳಿದ್ದಾರೆ.